SHARE

ಬೆಳಗಾವಿ: ಪ್ರಕೃತಿ ವಿಕೋಪದಿಂದ ಬರಡಾದ ಬೆಳಗಾವಿ ಜಿಲ್ಲೆಯ ತಾಲೂಕುಗಳಲ್ಲಿ ಕೇಂದ್ರ ತಂಡ ಇಂದು ಅಧ್ಯಯನದಂಗವಾಗಿ ವೀಕ್ಷಣೆ ನಡೆಸಿತು.ಕೇಂದ್ರ ಗ್ರಾಮೀಣಾಭಿವೃದ್ಧಿ ಸಚಿವಾಲಯದ ಅಧೀನ ಕಾರ್ಯದರ್ಶಿ ಎಸ್. ಬಿ. ತಿವಾರಿ, ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗದ ಮುಖ್ಯ ಕನ್ಸ್ ಲ್ಟಂಟ್ ಸಲೀಂ ಹೈದರ್ ಹಾಗೂ ಕೆಂದ್ರ ವಿದ್ಯುತ್ ಪ್ರಾಧಿಕಾರದ ಉಪನಿರ್ದೇಶಕ ಕಮಲ್ ಚೌಹಾನ್ ತಂಡ ಇಂದು ರಾಮದುರ್ಗ, ಬೈಲಹೊಂಗಲ ಹಾಗೂ ಸವದತ್ತಿ ತಾಲೂಕುಗಳಲ್ಲಿ ಜಿಲ್ಲಾಧಿಕಾರಿ ಯೊಂದಿಗೆ ತೆರಳಿ ಬರ ಅಧ್ಯಯನ ನಡೆಸಿತು.

ಬರ ಅಧ್ಯಯನದ ಮದಲ ಭೇಟಿಯಲ್ಲೇ ತಳಕಂಡ ಒಣಗಿದ ಸೇದು ಬಾವಿಯ ದರ್ಶನ ಮಾಡಿಸಿ ಬೈಲಹೊಂಗಲ ತಾಲೂಕಿನ ಮುರಕಿಭಾವಿ ಗ್ರಾಮಸ್ಥರು ತಮ್ಮ ಅಳಲು ತೋಡಿಕೊಂಡರು. ತಮ್ಮ ಗ್ರಾಮದಲ್ಲಿ ಕುಡಿಯಲು ನೀರಿಲ್ಲ, ಜಾನುವಾರುಗಳಿಗೆ ಮೇವಿಲ್ಲ ಎಂದು ಅಧಿಕಾರಿಗಳೆದುರು ಅಸಮಧಾನ ವ್ಯಕ್ತಪಡಿಸಿದರು. ನಂತರ ಹಣಬರಟ್ಟಿ-ಗಜಮನಾಳ ಗ್ರಾಮಕ್ಕೆ ತೆರಳಿದ ತಂಡ ಉದ್ಯೊಗಖಾತ್ರಿ ಅಡಿ ಜನತೆಗೆ ನೀಡಲಾದ ಕೆಲಸದ ಬಗ್ಗೆ ಪರಿಶೀಲಿಸಿತು. ಅಲ್ಲಿಂದ ಚಚಡಿ ಗ್ರಾಮದ ಬಳಿ ರಾಜ್ಯ ಹೆದ್ದಾರಿ ಪಕ್ಕ ಸಂಪೂರ್ಣ ನಾಶವಾದ ಕಡಲೆ ಬೆಳೆಯನ್ನು ಕೇಂದ್ರ ತಂಡ ಮತ್ತು ಜಿಲ್ಲಾಧಿಕಾರಿ ಎನ್. ಜಯರಾಮ ವೀಕ್ಷಿಸಿದರು.

ನಂತರ ತೆಣಿಕೊಳ್ಳ – ತಡಸಲೂರು ಗ್ರಾಮಕ್ಕೆ ತೆರಳಿ ಅಲ್ಲಿನ ‘ಫಾಡರ್ ಬ್ಯಾಂಕ್ ‘( ಮೇವು ಬ್ಯಾಂಕ್ ) ಅವಲೋಕಿಸಿದರು. ದನಗಳಿಗೆ ತೀವ್ರ ಮೇವಿನ ತೊಂದರೆ ಯಾಗಿದ್ದು ಮೇವು ಉಚಿತವಾಗಿ ಕೊಡಬೇಕು ಎಂದು ಅಲ್ಲಿನ ಜನತೆ ಭಿನ್ನವಿಸಿದರು. ಕುಡಿಯಲು ನೀರೀನ ಕೊರತೆಯಾಗಿದೆ. ಟ್ಯಾಂಕರ್ ನೀರು ಯಾತಕ್ಕೂ ಸಾಲದು ಜತೆಗೆ ಟ್ಯಾಂಕರ್ ನೀರಿಗೆ ಜನತೆ  ತಮ್ಮಲ್ಲೇ ಜಗಳ ಮಾಡಿಕೊಳ್ಳುತ್ತಿದ್ದಾರೆ ಶಾಶ್ವತ ನಿರೀನ ಪರಿಹಾರ ಮಾಡಿಕೊಡಿ, ಸಮೀಪದ ಮಲಪ್ರಭಾ ನದಿಯಿಂದ ಪೈಪ್ಲೈನ್ ಮೂಲಕ ತಡಸಲೂರಿಗೆ ನೀರು ತರಿಸಬೇಕು ಎಂದು ಒತ್ತಾಯಿಸಿದರು.

ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ ಎನ್. ಜಯರಾಮ ಮಲಪ್ರಭಾ ನದಿಯಿಂದ ನೀರು ತರುವ ಯೋಜನೆ ಸಾಧ್ಯಾಸಾಧ್ಯತೆಗಳನ್ನು ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು. ನಂತರ ತಂಡ ಚಂದರಗಿ ಮಾರ್ಗವಾಗಿ ಸವದತ್ತಿ, ರಾಮದುರ್ಗ ತಾಲೂಕುಗಳಲ್ಲಿ ಸಂಜೆವರೆಗೆ ರೈತರ ಜಮೀನಿನ ಸ್ಥಿತಿಗತಿ, ಜನಜನಾವಾರುಗಳ ಸಮಸ್ಯೆ, ಕುಡಿಯುವ ನಿರೀನ ಪೂರೈಕೆ, ಉದ್ಯೋಗ ಖಾತರಿ ಯೋಜನೆ ಅನುಷ್ಠಾನ ಮತ್ತಿತರೆ ವಿಷಯಗಳ ಬಗ್ಗೆ ಆಯಾ ಗ್ರಾಮಗಳಲ್ಲಿ ಹಿಂದಿ ಭಾಷೆ ಬಲ್ಲ ಗ್ರಾಮಸ್ಥರಿಂದ ಕೇಳಿ ತಿಳಿದರು.

ಕೇಂದ್ರ ಗ್ರಾಮೀಣಾಭಿವೃದ್ಧಿ ಸಚಿವಾಲಯದ ಅಧೀನ ಕಾರ್ಯದರ್ಶಿ ತಿವಾರಿ ಪ್ರತಿಕ್ರಿಯಿಸಿ ಮೇಲ್ನೋಟಕ್ಕೆ ಗಂಭೀರ ಬರಗಾಲ ಜಿಲ್ಲೆಯಲ್ಲಿ ಆವರಿಸಿರುವುದು ಖಚಿತವಾಗಿದೆ, ಬೆಳೆ ನಷ್ಟ,  ಜೀವಜಲ ಕೊರತೆ, ಕಂಗಾಲಾದ ಇಲ್ಲಿನ ಗ್ರಾಮೀಣ ಜನತೆಯ ಧ್ವನಿ ಕೇಳಿದೆ. ಕೇಂದ್ರ ಸರಕಾರಕ್ಕೆ ಈ ಅಧ್ಯಯನ ತಂಡದ ಮುಖ್ಯಸ್ಥರ ಮೂಲಕ ವಾರದಲ್ಲೇ ವರದಿ ಸಲ್ಲಿಸಲಾಗುವುದು ಎಂದು ತಿಳಿಸಿದರು.

ಜಿಪಂ. ಸಿಇಓ ಡಾ. ರಾಮಚಂದ್ರನ್,  ಕೃಷಿ ಜೆಡಿ ವೆಂಕಟರಾಮರೆಡ್ಡಿ, ಎಸಿ ಶಿವಾನಂದ ಭಜಂತ್ರಿ, ಬೈಲಹೊಂಗಲ, ಸವದತ್ತಿ ತಹಶೀಲ್ದಾರರು ಸೇರಿದಂತೆ ಇನ್ನಿತರ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.

ನೀರಿಲ್ಲದ ಊರರ್ರೀ…ಡಿಸಿ ಚಕಿತ..

ಇಡೀ ಜಿಲ್ಲೆಯಲ್ಲಿ ತಡಸಲೂರಿಗೇ ನೀರಿಲ್ರೀ…ನೀರಿಲ್ಲದೂರು ಇದೊಂದೇರಿ  ಎಂಬ ರೈತನೊಬ್ಬನ ಮಾತಿಗೆ ಕ್ಷಣಕಾಲ ಚಕಿತರಾದ ಡಿಸಿ ಎನ್. ಜಯರಾಮ್ ‘ಇಲ್ರೀ ಯಜಮಾನ್ರೇ ಈಗ ಎಲ್ಲಾ ಕಡೆ ಸಮಸ್ಯೆ ಇದೇರಿ ನಿಮ್ನೂರ ಸಮಸ್ಯೆನೂ ಬಗೆ ಹರಿಸೋಣ’ ನಿಮಗೆ ನೀರು ಕೊರತೆಯಾಗದಂತೆ ಅಧಿಕಾರಿಗಳು ನೋಡಿಕೊಳ್ಳುತ್ತಾರೆ ಎಂದು  ಬಿಸಿಲ ಡಾವರದ ಮಧ್ಯೆ ಹಾಸ್ಯ ಚಟಾಕೆ ಹಾರಿಸಿ ಮುಂದಡಿಯಿಟ್ಟರು.