SHARE

ಬೆಳಗಾವಿ: ಪ್ರೇಮಿಗಳ ದಿನ ಆಚರಿಸುವುದು ಭಾರತೀಯ ಸಂಸ್ಕ್ರತಿ ಮತ್ತು ಸಂಸ್ಕಾರಕ್ಕೆ ವಿರುದ್ಧವಾಗಿದ್ದು ಅಂಥ ಪಾಶ್ಚಾತ್ಯ ಆಚರಣೆಗಳಿಗೆ ಯಾವುದೇ ಕಾರಣಕ್ಕೂ ಅನುಮತಿ ನೀಡಬಾರದು ಎಂದು ಶ್ರೀರಾಮಸೇನೆ ಒತ್ತಾಯಿಸಿದೆ.

ಇಂದು ಬೆಳಿಗ್ಗೆ ಜಿಲ್ಲಾಧಿಕಾರಿ ಕಚೇರಿ ಎದುರು ಜಿಲ್ಲಾಧ್ಯಕ್ಷ ರಮಾಕಾಂತ್ ಕೊಂಡುಸ್ಕರ್ ಹಾಗೂ ರವಿ ಕೊಕೀತಕರ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದ ಶ್ರೀರಾಮಸೇನಾ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದರು. ಇಸ್ಲಾಂ ಯುವಕರು ಲವ್ ಜಿಹಾದ್ ಹೆಸರಲ್ಲಿ ಹಿಂದೂ ಯುವತಿಯರ ಧರ್ಮಾಂತರ ಮಾಡುವ ಸಂಚು ಎಂದಿನಿಂದ ನಡೆದೇ ಇದೆ. ಮಹಿಳೆಯರಿಗೆ ಹಿಂದೂ ಸಂಸ್ಕ್ರತಿ ಯಲ್ಲಿ ವಿಶೇಷ ಗೌರವ ಹಾಗೂ ಸ್ಥಾನಮಾನಗಳಿದ್ದು ಅದಕ್ಕೆ ಯಾವುದೇ ಕಾರಣಕ್ಕೂ ಧಕ್ಕೆಯಾಗಬಾರದು. ಯುವಕ ಯುವತಿಯರು ಪ್ರೀತಿ ಪ್ರೇಮದ ಹೆಸರಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಅಶ್ಲೀಲ- ಅಸಭ್ಯವಾಗಿ ವರ್ತಿಸುವುದು,  ಕ್ಲಬ್ ಬಾರ್ ಗಳಲ್ಲಿ ಅಂಧಾದುಂದಿ ವರ್ತನೆ ಮಾಡುವುದು ಖಂಡನಾರ್ಹ ಎಂದು ಶ್ರೀರಾಮ ಸೇನೆ ಗಮನಸೆಳೆಯಿತು.