SHARE

ಬೆಳಗಾವಿ:ವಿಷಪೂರಿತ ಹಾಲು ತಯಾರಿಕಾ ಘಟಕದ ಮೇಲೆ ಅಥಣಿ ತಹಶೀಲ್ದಾರ ಇಂದು ದಾಳಿ ನಡೆಸಿ ಒಬ್ಬನನ್ನು ವಶಕ್ಕೆ ಪಡೆದಿದ್ದಾರೆ.

ಬೆಳಗಾವಿ ಜಿಲ್ಲೆ ಅಥಣಿ ತಾಲೂಕಿನ ಕೃಷ್ಣಾ ಕಿತ್ತೂರ ಗ್ರಾಮದಲ್ಲಿ ಅಥಣಿ ತಹಶೀಲ್ದಾರ ಉಮಾದೇವಿ ನೇತೃತ್ವದಲ್ಲಿ ದಾಳಿ ಓರ್ವನ ಬಂಧನವಾಗಿದೆ. ಶಿವಗೌಡ ರಾಯಗೌಡ ಪಾಟೀಲ ಬಂಧಿತ ವ್ಯಕ್ತಿ. ದಾಳಿಯಲ್ಲಿ 100 ಕೆಜಿ ಯೂರಿಯ, 50 ಕೆಜಿ ರಾಸಾಯನಿಕ ಪೌಡರ್ ಹಾಗೂ 700 ಲೀಟರ್ ನಕಲಿ ಹಾಲು ವಶಕ್ಕೆ ಪಡೆಯಲಾಗಿದ್ದು,
ಕಾಗವಾಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.