SHARE

ಬೆಳಗಾವಿ: ಮೋದಿಯ ಡಿಜಿಟಲೈಸೇಶನ್ ದೇಶಕ್ಕೆ ಮಾರಕವಾಗಿದ್ದು, ಶೇ. ೮೦ ರಷ್ಟು ಜನತೆ ಕ್ಯಾಶ್ ವಿನಿಮಯ ಮಾಡುವಾಗ ಸ್ವಾಪ್ ಮಾಡುವ ತಂತ್ರಜ್ಞಾನ ಸಮಯೋಚಿತವಲ್ಲ ಎಂದು ಎಐಸಿಸು ಉಸ್ತುವಾರಿ ಲಕ್ಷ್ಮಾರೆಡ್ಡಿ ಆರೋಪಿಸಿದರು.

ಪ್ರತಿ ಸಾರಿ ಕಾರ್ಡ್ ಸ್ವಾಪ್(swap) ಮಾಡಿದಾಗ ೧೦೦ ಕ್ಕೆ ಒಂದು ರೂಪಾಯಿ ವಿದೇಶಿ ಬ್ಯಾಂಕ್ ಗಳಿಗೆ ಸಂದಾಯವಾಗುತ್ತದೆ. ಡೆಬಿಟ್ ಕಾರ್ಡ್ ಗಳ ಮ್ಯಾನೇಜಮೆಂಟ್ ವಿದೇಶಿ ಬ್ಯಾಂಕ್ ಗಳು ಮಾಡುತ್ತವೆ. ನಮ್ಮಲ್ಲೆಲ್ಲಿದೆ ಆ ತಂತ್ರಜ್ಞಾನ ಎಂದು ಪ್ರಶ್ನಿಸಿದರು.
ನೋಟ ಬಂದ್ ನಿಂದ ಪ್ರಾರಂಭದಲ್ಲಿ ರೈತರು, ಕಾರ್ಮಿಕರು ಮತ್ತು ಸಾಮಾನ್ಯ ಜನರಿಗೆ ಆದ ಅನಾನುಕೂಲ ಈಗ ದೊಡ್ಡ ಉದ್ಯಮಗಳಿಗೂ ತಟ್ಟಿದೆ. ಮೋದಿ ಅವರಿಂದ ದೇಶದ ಅಭಿವೃದ್ಧಿ ನಿಂತು ಹೋಗಿದೆ, ಅರ್ಥವ್ಯವಸ್ಥೆ ಕುಸಿದಿದೆ. ಈ ವಿಷಯವನ್ನು ದೇಶದ ಜನತೆಗೆ ತಲುಪಿಸುವ ಕೆಲಸ ಸೊನಿಯಾ ಗಾಂಧೀಜಿ ಮಾರ್ಗದರ್ಶನದಲ್ಲಿ ರಾಹುಲ ಗಾಂಧಿ ದೇಶಾದ್ಯಂತ ಮಾಡಲಿದ್ದಾರೆ ಎಂದರು. ನೋಟ ಬಂದ ಮಾಡಿ ‘ಕಾಲಾಧನ್’ ಹಿಎಇಯುವ ಯೋಜನೆ ವಿಫಲವಾಗುತ್ತಿದ್ದಂತೆ ಈಗ ಡಿಜಿಟಲೈಸೆಶನ್ ಬೊಗಳೆ ಮೋದಿ ಶುರು ಮಾಡಿದ್ದಾರೆ ಎಂದು ಅವರು ಟೀಕಿಸಿದರು.

ನೋಟ ಬಂದಿಯಿಂದ ಆದ ಅಸಹನೀಯ ಅನುಭವವನ್ನು ಸಾಮಾನ್ಯ ಜನರಿಂದಲೇ ಸದ್ಯದಲ್ಲೇ ಆಕರಿಸಲಾಗುವುದು.. ನೋಟ ಬಂದನಿಂದ ನಿಜವಾಗಿಯೂ ಜನತೆಯ ಸಂಕಷ್ಟ ಈಗ ಪ್ರಾರಂಭವಾಗಿದೆ. ನಾಗರಿಕರನ್ನು ಹೆದರಿಸಿ ಮೋದಿ ದೇಶದಲ್ಲಿ ಆಡಳಿತ ನಡೆಸುತ್ತಿದ್ದಾರೆ. ಪಾಕಿಸ್ತಾನ ಭಾರತ ನಡುವೆ ಟೆನ್ಶನ್ ಉಂಟಾಗಲು ಮೋದಿ ನೇರ ಕಾರಣ‌. ನೋಟ ಬಂದ್ ಗಿಂತಲೂ ಡಿಜಿಟಲೈಸೇಶನ್ ಬಹಳ ಕೆಟ್ಟದ್ದು. ಇದರಿಂದ ಇದ್ದ ವ್ಯವಸ್ಥೆಯೂ ಕುಸಿದು ಹೋಗಲಿದೆ. ಪ್ರತಿ ಕಾಂಗ್ರೆಸ್ ಕಾರ್ಯಕರ್ತರು ಇದರ ವಿರುದ್ದ ತಳಮಟ್ಟದಿಂದ ಜನಜಾಗೃತಿ ಮಾಡಲಿದ್ದು ಕಾರ್ಯಕ್ರಮದಲ್ಲಿ ‘ಮೋದಿ’ ಗಾಗಿ ಒಂದು ದೊಡ್ಡ ಕುರ್ಚಿ ಇಟ್ಟು ಚರ್ಚೆ ನಡೆಸಲಾಗುವುದು ಎಂದು ವ್ಯಂಗ್ಯವಾಡಿದರು.

ಶಾಸಕ ಗಣೇಶ ಹುಕ್ಕೇರಿ, ಎಂಎಲ್ ಸಿ ಆರ್. ಬಿ. ತಿಮ್ಮಾಪುರ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ವಿನಯ ನಾವಲಗಟ್ಟಿ, ಕೆಪಿಸಿಸಿ ಬೆಳಗಾವಿ ಉಸ್ತುವಾರಿ ಪ್ರದೀಪ, ರುಕ್ಮಿಣಿ ಸಾಹುಕಾರ ಇತರರು ಉಪಸ್ಥಿತರಿದ್ದರು.