SHARE

ಬೆಳಗಾವಿ: ಸಾರ್ವಜನಿಕ ಸ್ಥಳಗಳನ್ನು ತಮ್ಮ ಸ್ವಂತ ಮನೆಯಂತೆ ಸ್ವಚ್ಚ ಒಪ್ಪ ಓರಣದಿಂದ ಇಡಿ ಎಂದು ಜನತೆಗೆ ರೈಲ್ವೇ ನಿಲ್ದಾಣ ಪ್ರಬಂಧಕ ಎಸ್. ಸುರೇಶ ಮನವಿ ಮಾಡಿದರು.

ನಗರದ ಉತ್ತರ ರೊಟರಿ ಕ್ಲಬ್ ವತಿಯಿಂದ ಸ್ವಚ್ಛ ಭಾರತ ಸ್ವಚ್ಚ ಅಭಿಯಾನ ಇಂದು ರೈಲು ನಿಲ್ದಾಣ ಆವರಣದಲ್ಲಿ ನಡೆಯಿತು. ಬೆಳಿಗ್ಗೆ ೭:೩೦ ರಿಂದ ೯ ರವರೆಗೆ ರೈಲ್ವೇ ಫ್ಲಾಟಫಾರ್ಮ್ ಹಾಗೂ ಟ್ರ್ಯಾಕ್ ಸ್ವಚ್ಛತೆ ಕೈಗೊಂಡರು.

ಪ್ರಧಾನಿ ಮೋದಿ ಆಶಯದಂತೆ ಸುತ್ತಲಿನ ಪರಿಸರದ ಸ್ವಚ್ಚತೆ ಕಾಯ್ದುಕೊಳ್ಳುವುದು ಅತ್ಯವಶ್ಯಕ, ಸಾರ್ವಜನಿಕರು ಹಾಗೂ ಮಕ್ಕಳಿಗೆ ಪರಿಸರ ಸ್ವಚ್ಚ ಇಡುವ ಪ್ರಜ್ಞೆ ಬೆಳೆಸುವುದು ನಮ್ಮ ಉದ್ದೇಶ. ಜನತೆ ಡಸ್ಟಬೀನ್ ಬಳಸದೇ ಎಲ್ಲೆಂದರಲ್ಲಿ ಕಸ, ಬಾಟಲಿ, ಪ್ಲಾಸ್ಟಿಕ್ ಚೆಲ್ಲುವುದು, ಉಗುಳುವುದು ಅಸಹ್ಯ ಮೂಡಿಸಿದೆ ಎಂದು ರೋಟರಿ ಉಪಾಧ್ಯಕ್ಷ ದುರ್ಗೇಶ ಹರಿತೆ ತಿಳಿಸಿದರು.

ರೈಲ್ವೇ ನಿಲ್ದಾಣದ ಪ್ರಬಂಧಕ ಎಸ್. ಸುರೇಶ, ರೈಲ್ವೇ ಹೆಲ್ತ್ ಇನ್ಸ್ ಪೆಕ್ಟರ್ ಶಿವಪ್ರಕಾಶ, ಮೈಕಲ್ ಇನ್ನಿತರ ಸಿಬ್ಬಂಧಿ ಕೈಜೋಡಿಸಿದರು. ರೊಟೇರಿಯನ್ ಮಯಕುಂದ ಮಹಾಗಾಂವಕರ, ರಾಜು ನಾಯಿಕ, ಕ್ರಾಂತಿ ಕಂಟಕ, ಮಹಾಂತೇಷ ಪುರಾಣಿಕ, ಡಾ. ಡಿ. ಟಿ. ಬಾಮಬೆ, ಮಂಗೇಶ ಕಂಟಕ, ಆನಂದ ನಾಯಿಕ, ಪ್ರಕಾಶ ಪಾಟೀಲ ಹಾಗೂ ಆ್ಯನೆಟ್ ಅಮೋಘ ನಾಯಕ ಮತ್ತು ಅಥರ್ವ ಕಂಟಕ ಭಾಗವಹಿಸಿದರು.

ರಕ್ತದಾನ ಸಮಾಜಕ್ಕೆ ನಾವು ಸಲ್ಲಿಸುವ ಸೇವೆ: ಎಸ್. ಸುರೇಶ : ರಕ್ತದಾನದ ಮಹತ್ವ ಬಣ್ಣಿಸಲಸಾಧ್ಯ, ಜೀವ ನೀಡುವ ಈ ಅಪರೂಪದ ಸೇವೆಯನ್ನು ಪ್ರತಿ ನಾಗರಿಕರು ಮಾಡಬೇಕು ಎಂದು ಬೆಳಗಾವಿ ರೈಲು ನಿಲ್ದಾಣ ಪ್ರಬಂಧಕ ಎಸ್. ಸುರೇಶ ತಿಳಿಸಿದರು.

ರೈಲು ನಿಲ್ದಾಣ ಆಟೋ ಚಾಲಕರು ಉಚಿತ ವೈದ್ಯಕೀಯ ತಪಾಸಣೆ ಹಾಗೂ ರಕ್ತದಾನ ಶಿಬಿರ ಇಡಯತ್ತೇವೆ ಎಂದು ಮನವಿ ಮಾಡಿದಾಗ ಅಪಾರ ಸಂತೋಷವಾಯಿತು. ಆಟೋ ಓಡಿಸುವ ಜತೆಗೆ ಸಾಮಾಜಿಕ ಕಾರ್ಯದಲ್ಲೂ ಭಾಗವಹಿಸುವುದು ಮಾನವೀಯತೆಯ ಭಾಗ. ಬ್ಲಡ್ ಡೊನೇಶನ್ ಪತ್ರಿಕೆಯಲ್ಲಿ ಮಾಹಿತಿ ಪಡೆದು ನಾವು ದಾನ ಮಾಡಿ ಬಂದರೆ ಅದೊಂದು ಸಮಾಜ ಸೇವೆ ಎಂದರು.

ಡಾ. ಸಮೀರ ಶೇಖ್, ಡಾ. ಮಲ್ಲಿಕಾರ್ಜುನ, ಡಾ. ಮದನ್ ಡೊಂಗ್ರೆ ಚಿಕಿತ್ಸೆಗೆ ಆಗಮಿಸಿದ್ದರು.
ಆಟೊ ಚಾಲಕರಾದ ಗೌತಮ ಕೆ, ಬಿ. ರಫೀಕ್, ಮಸ್ತಾನ ಬಿಸ್ತಿ, ಬದ್ರುದಿನ್ ವಾಡೀಕರ, ಥಾಮಸ್ ಫ್ರಾನ್ಸಿಸ್ ಸೇರಿದಂತೆ ನೂರಾರು ಚಾಲಕರು ಭಾಗವಹಿಸಿದ್ದರು.
ನಿಲ್ದಾಣಕ್ಕೆ ಬರುವ ಸಾರ್ವಜನಿಕರ ಆರೋಗ್ಯ ತಪಾಸಣೆ, ರಕ್ತದಾನ ಶಿಬಿರ ಮಧ್ಯಾಹ್ನದವರೆಗೆ ಮುಂದುವರೆಯಿತು.