SHARE

ಬೆಳಗಾವಿ: ಸುಮಾರು 7.25 ಲಕ್ಷ ಮೌಲ್ಯದ ಕಳವು ಮಾಲನ್ನು ಇಂದು ಘಟಪ್ರಭಾ ಪೊಲೀಸರು ಪತ್ತೆ ಹಚ್ಚಿ ಮೂವರನ್ನು ಬಂಧಿಸಿದ್ದಾರೆ.ಇಂದು ಸಂಜೆ ಸುದ್ದಿಗೋಷ್ಠಿಯಲ್ಲಿ ವಿಷಯ ತಿಳಿಸಿದ ಧಾರವಾಡ ಎಸ್ ಪಿ ಸದ್ಯ ಬೆಳಗಾವಿ ಇನ್ ಚಾರ್ಜ್ ಎಸ್ ಪಿ ಧರ್ಮೇಂದ್ರಕುಮಾರ ಮೀನಾ ಘಟಪ್ರಭಾ ಪಿಎಸ್ಐ ಜಿ. ವಿ. ಹಳ್ಳೂರ ಗಸ್ತಿಯಲ್ಲಿದ್ದಾಗ ಮಲ್ಲಾಪೂರ ಪಿಜಿ ಮುಗಳಖೋಡ ಶಾಖಾ ಮಠದ ಹತ್ತಿರ ಸಂಶಯಾಸ್ಪದವಾಗಿ ತಿರುಗಾಡುತ್ತಿದ್ದಾಗ ೩ ಜನರನ್ನು ಕರೆತಂದು ವಿಚಾರಿಸಿದಾಗ ರವಿ ರಾಮೇಶ ಭೋವಿ(೨೦), ಭರತ ನಾಗರಾಜ ಭೋವಿ(೨೨), ವೆಂಕಟೇಶ ರಂಗಪ್ಪ ಭೋವಿ(೨೮) ಎಂಬುವವರು ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿರುವುದು ಖಚಿತವಾಗಿದೆ ಎಂದರು.

ಮೂವರು ಚಿತ್ರದುರ್ಗ ಜಿಲ್ಲೆ ಹೊಸದುರ್ಗದವರಾಗಿದ್ದು ಘಟಪ್ರಭಾ ಠಾಣೆ ವ್ಯಾಪ್ತಿಯಲ್ಲಿ ೪ ಹಾಗೂ ಗೋಕಾಕ ವ್ಯಾಪ್ತಿಯಲ್ಲಿ೫ ಪ್ರಕರಣಗಳಲ್ಲಿ ಭಾಗಿಯಾಗಿದ್ದಾರೆ.ಜತೆಗೆ ವೆಂಕಟೇಶನ ಸಂಬಂಧಿ ಇನ್ನೊಬ್ಬ ವೆಂಕಟೇಶ ನಾಗಪ್ಪ ಭೋವಿ(೩೩) ಬಂಧಿತನಾಗಿದ್ದಾನೆ.  ಒಟ್ಟು ೯ ಪ್ರಕರಣಗಳಲ್ಲಿ ೩೯೩ ಗ್ರಾ. ಚಿನ್ನಾಭರಣ, ೭೫೦ ಗ್ರಾ ಬೆಳ್ಳಿ ಆಭರಣ ವಶಪಡಿಸಿಕೊಳ್ಳಲಾಗಿದೆ ಎಂದರು.
ಹೆಚ್ಚುವರಿ ಎಸ್ ಪಿ ರವೀಂದ್ರ ಗಡಾದಿ, ಪಿಎಸ್ ಐ ಗೋಪಾಲ ಹಳ್ಳೂರ, ಎಎಸ್ ಐ ಪಿ. ಆರ್. ಹನುಮನ್ನವರ ಇತರ ಸಿಬ್ಬಂಧಿ ಉಪಸ್ಥಿತರಿದ್ದರು.