SHARE

ಬೆಳಗಾವಿ : ಕತ೯ವ್ಯನಿರತ ಸಿಪಿಐ ಮೇಲೆ ಹಲ್ಲೆಗೆ ಯತ್ನ ನಡೆಸಿದ ಘಟನೆ ತಡರಾತ್ರಿ ಸದಾಶಿವ ನಗರದಲ್ಲಿ ನಡೆದಿದೆ.. ಎಪಿ ಎಂಸಿ ಠಾಣೆ ಸಿಪಿಐ ಜೆ. ಎಂ ಕಾಲಿಮಿರ್ಚಿ ಅವರು ಗಲಾಟೆ ನಿಯಂತ್ರಣಕ್ಕೆ ಆಗಮಿದಿ ಜನರನ್ನು ಚದುರಿಸಿದ ನಂತರ ಪೊಲೀಸರೊಂದಿಗೆ ಕೆಲವರು ವಾದಕ್ಕೆ ಇಳಿದಾಗ ಬಿಡಿಸಲು ಮುಂದಾದ ಇನ್ಸ ಪೆಕ್ಟರ್ ಶರ್ಟ್ ಹಿಡಿದು ಕೆಲ ಕಿಡಿಗೇಡಿಗಳು  ಎಳೆದಾಡಿದ್ದಾರೆ.  ಸದಾಶಿವ ನಗರ ಮುಖ್ಯ ರಸ್ತೆಯ ಬೇಕರಿ ಬಳಿ ಘಟನೆ ನಡೆದಿದ್ದು. ಸಂಬಂದ ಪಟ್ಟ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ. ಕಿಶನ ಮತ್ತು ಅಜರುದ್ದಿನ ಎಂಬ ಯುವಕರು ಬಂಧನವಾದ ಆರೋಪಿಗಳು. ಕಳೆದ ತಡ ರಾತ್ರಿ ನಡೆದ ಘಟನೆ. ಎಪಿಎಂಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.