SHARE

ಬೆಳಗಾವಿ: ನಗರದ ರಿಯಲ್ ಎಸ್ಟೇಟ್ ಉದ್ಯಮಿಗಳಿಗೆ ನೂರಾರು ಕೋಟಿ ರೂಪಾಯಿ ಪಂಗನಾಮ ಹಾಕಿದ್ದವನ ಪ್ರಕರಣಕ್ಕೆ ಸಂಬಂಧಿಸಿ ಇಬ್ಬರು ಪಾಲಿಕೆ ಯುವ ಸದಸ್ಯರ ವಿರುದ್ಧ ಮಾರ್ಕೇಟ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಉದ್ಯಮಿ ಝುಲ್ಫಿ ಖತೀಬ್ ಅಪಹರಣ ಮಾಡಿದ ಆರೋಪದ ಮೇಲೆ ಇಬ್ಬರು ಮಹಾನಗರ ಪಾಲಿಕೆ ಸದಸ್ಯರು ಮತ್ತು ಓರ್ವ ರಿಯಲ್ ಇಸ್ಟೇಟ್ ಉದ್ಯಮಿಯ ವಿರುದ್ದ ಮಾರ್ಕೇಟ್ ಠಾಣೆಯಲ್ಲಿ ಕಿಡ್ನ್ಯಾಪ್ ಕೇಸ್ ದಾಖಲಾಗಿದೆ.

ಮಹಾನಗರ ಪಾಲಿಕೆ ಸದಸ್ಯರಾದ ಮತೀನ ಅಲಿ ಶೇಖ್, ಅಕ್ರಂ ಬಾಳೆಕುಂದ್ರಿ ಮತ್ತು ರಿಯಲ್ ಎಸ್ಟೇಟ್ ಉದ್ಯಮಿ ಮೇಂಡಾ ಇಮ್ರಾನ್ ವಿರುದ್ಧ ಪ್ರಕರಣ ದಾಖಲಾಗಿದೆ. ಅಪಹರಣ ಮಾಡಿ ತನ್ನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆಂದು ಪೋಲಿಸ್ ಅಯುಕ್ತ ಟಿ. ಜಿ. ಕೃಷ್ಣ ಭಟ್ ಅವರಿಗೆ ಝುಲ್ಫಿ ಪತ್ರ ಬರೆದಿದ್ದನೆನ್ನಲಾಗಿದೆ.

ಪತ್ರ ಆಧರಿಸಿ ಮಾರ್ಕೇಟ್ ಠಾಣೆಯಲ್ಲಿ ದೂರು ದಾಖಲಾಗಿದೆ ಎಂದು ಮೂಲಗಳು ತಿಳಿಸಿವೆ.
ದೂರಿನಲ್ಲಿ ತನಗೆ ಹಾಗೂ ತನ್ನ ಕುಟುಂಬಕ್ಕೆ ಜೀವ ಬೆದರಿಕೆ ಇದೆ ಎಂದು ಝುಲ್ಫಿ ಗೋಗರೆದಿದ್ದಾನೆ.
ಇದರಿಂದಾಗಿ ತಾನು ತಲೆ ಮರೆಸಿಕೊಂಡಿದ್ದಾಗಿ ಪತ್ರದಲ್ಲಿ ಉಲ್ಲೆಖಿಸಿದ್ದಾನೆ.