SHARE

ಬೆಳಗಾವಿ:ಇಲ್ಲಿನ ಆಟೊನಗರ ಕೆಎಸ್ ಸಿಎ ಅಂತಾರಾಷ್ಟ್ರೀಯ ಕ್ರಿಕೇಟ್‌ ಮೈದಾನದಲ್ಲಿ ಇಂಡಿಯನ್ ಝೋನಲ್ ಲೆವೆಲ್ ರೂರಲ್ ಟಿ-ಟ್ವೆಂಟಿ ಕ್ರಿಕೇಟ್ ಪಂದ್ಯಗಳು ಇಂದು ಪ್ರಾರಂಭವಾದವು. ಹೆಚ್ಚುವರಿ ಜಿಲ್ಲಾಧಿಕಾರಿ ಡಾ. ಸುರೇಶ ಇಟ್ನಾಳ ಟೂರ್ನಿಗೆ ಚಾಲನೆ ನೀಡಿದರು. ರಾಷ್ಟ್ರೀಯ ಗ್ರಾಮೀಣ ಕ್ರಿಕೇಟ್ ಅಸೋಸಿಯೇಶನ್ ಕಾರ್ಯದರ್ಶಿ ಲವಕುಮಾರ ಜಾಧವ, ಕರ್ನಾಟಕ ಗ್ರಾಮೀಣ ಕ್ರಿಕೇಟ್ ಅಸೋಸಿಯೇಶನ್ ಅಧ್ಯಕ್ಷ ಡಾ. ರವಿ ಪಾಟೀಲ, ಮಾಜಿ ಮೇಯರ್ ಎಂ. ಬಿ. ನಿರ್ವಾಣಿ, ಬಸು ಅಗಸಗಿ, ನ್ಯಾಯವಾದಿ ಬಸವರಾಜ ರೊಟ್ಟಿ ಉಪಸ್ಥಿತರಿದ್ದರು.

ಬೆಳಿಗ್ಗೆ ೯ಕ್ಕೆ ಕರ್ನಾಟಕದ ಸೌಥ ಝೋನ್ ಹಾಗೂ ಮಹಾರಾಷ್ಟ್ರದ ನಾರ್ಥ ಝೋನ್ ನಡುವೆ ಚೊಚ್ಚಲ ಪಂದ್ಯ ಪ್ರಾರಂಭವಾಯಿತು. ಕರ್ನಾಟಕ ತಂಡ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ಅಮಿತ ಮತ್ತು ನಿತಿನ್ ಬ್ಯಾಟಿಂಗ್ ಪ್ರಾರಂಭಿಸಿದರು. ಫೆ. ೨೮ ರವರೆಗೆ ಕ್ರಿಕೇಟ್ ಲೀಗ್ ಪಂದ್ಯಗಳು ಮುಂದುವರೆಯಲಿವೆ.