SHARE

ಬೆಳಗಾವಿ:ನಗರದಲ್ಲಿ ರಾಜ್ಯಮಟ್ಟದ ಅಂಧರ ಕ್ರಿಕೇಟ್ ಪಂದ್ಯಾವಳಿ ಮಾರ್ಚ್ 3,4, 5 ರಂದು ಮೂರು ದಿನ ನಡೆಯಲಿವೆ. ಭಾನುವಾರ ಸಂಜೆ ಸುದ್ದಿಗೋಷ್ಠಿಯಲ್ಲಿ ಸಮರ್ಥನಂ ಅಂಗವಿಕಲ ಸಂಸ್ಥೆಯ ಮುಖ್ಯಸ್ಥ ಎಂ. ಅರುಣಕುಮಾರ ವಿಷಯ ತಿಳಿಸಿ ನಗರದ ಲಿಂಗರಾಜ ಮೈದಾನ ಹಾಗೂ ಆರ್ ಪಿಡಿ ಕಾಲೇಜು ಮೈದಾನದಲ್ಲಿ ಕ್ರಿಕೇಟ್ ನಡೆಯಲಿದ್ದು, ರಾಜ್ಯದ ಪ್ರತಿ ಜಿಲ್ಲೆಯಿಂದ ಆಗಮಿಸುವ ಆಟಗಾರರು ಸೇರಿ ಸುಮಾರು ೧೬ ತಂಡಗಳು ಭಾಗವಹಿಸಲಿವೆ ಎಂದರು.

ಕ್ರೀಡಾಪಟುಗಳಿಗೆ ಸದಾಶಿವ ನಗರದ ಅಂಬೇಡ್ಕರ್ ಭವನದಲ್ಲಿ ಊಟ, ವಸತಿ ವ್ಯವಸ್ಥೆ ಮಾಡಲಾಗಿದ್ದು, ಮಹಾನಗರ ಪಾಲಿಕೆ ಉಚಿತವಾಗಿ ನೀಡಿದೆ ಎಂದರು. ಕೆಎಲ್ಇ ಸಂಸ್ಥೆಯ ಎನ್ ಎಸ್ ಎಸ್ ವಿಭಾಗದಿಂದ ವಾಹನ ವ್ಯವಸ್ಥೆ ಮಾಡಿಕೊಳ್ಳಲಾಗಿದೆ ಎಂದರು. ಕ್ರೀಡೆಗಳ ಉದ್ಘಾಟನೆ ಟೂರ್ನಿಯ ಮುನ್ನಾದಿನ ಮಾ. ೨ ರ ಸಂಜೆ ಸದಾಶಿವ ನಗರದ ಅಂಬೇಡ್ಕರ್ ಉದ್ಯಾನದಲ್ಲಿ ನಡೆಯಲಿದ್ದು ಮುಖ್ಯ ಅತಿಥಿಯಾಗಿ ಮಾಜಿ ಸಚಿವ ಸತೀಶ ಜಾರಕಿಹೊಳಿ, ಜಿಲ್ಲಾಧಿಕಾರಿ ಎನ್. ಜಯರಾಮ, ಡಿಸಿಪಿ ಜಿ. ರಾಧಿಕಾ, ಶಾಸಕ ಫಿರೋಜ್ ಸೇಠ್, ಸಮರ್ಥನಂ ಸಂಸ್ಥೆಯ ಮಹಾಪೋಷಕ ಅನಿಲ ಎಂ. ಪೋತದಾರ, ಸಂಸ್ಥೆಯ ಸಂಸ್ಥಾಪಕ ಮಹಾಂತೇಷ ಕಿವಡಸನ್ನವರ, ಟ್ರಸ್ಟಿ ಉದಯಕುಮಾರ ಆಗಮಿಸಲಿದ್ದು, ಅಧ್ಯಕ್ಷತೆಯನ್ನು ವಿಧಾನಪರಿಷತ್ ಸದಸ್ಯ ವಿವೇಕರಾವ್ ಪಾಟೀಲ ವಹಿಸಲಿದ್ದಾರೆ ಎಂದರು.

ವಿಶ್ವ ಅಂಧರ ಕ್ರಿಕೇಟ್ ಟಿ-ಟ್ವೆಂಟಿಯನ್ನು ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ದೊಂದಿಗೆ ಭಾರತ ೨ ಬಾರಿ ಇಂಡಿಯಾ ತಂಡ ಜಯಗಳಿಸಿದೆ ಎಂದು ಸಂಸ್ಥೆಯ ಕ್ರೀಡಾಪಟುಗಳನ್ನು ಉಲ್ಲೇಖಿಸಿ ಅರುಣಕುಮಾರ ಸಂತಸ ವ್ಯಕ್ತಪಡಿಸಿದರು.

ಅಸಮಧಾನ: ಅಂಧರ ಕ್ರಿಕೇಟ್ ಪಂದ್ಯಾವಳಿ ಮತ್ತು ಕಾರ್ಯಕ್ರಮಗಳನ್ನು ಆಯೋಜಿಸಲು ಎಂಟರಪ್ರೇನರ್ಸ್ ಸಂಖ್ಯೆ ಕಡಿಮೆ ಎಂದು ಖೇದ ವ್ಯಕ್ತಪಡಿಸಿದರು.