SHARE

ಬೆಳಗಾವಿ:ಹಿಂದೂ ಸಂಸ್ಕೃತಿ ತಳಹದಿಯ ಮೇಲೆ ಭಾರತ ನಿಂತಿದೆ. ಗೋವುಗಳ ರಕ್ಷಣೆ ಪ್ರತಿಯೊಬ್ಬರ ಕರ್ತವ್ಯ. ಆದ ಕಾರಣ ಯಡಿಯೂರಪ್ಪನವರ ಹುಟ್ಟು ಹಬ್ಬದ ಅಂಗವಾಗಿ ಗೋ ಶಾಲೆಯಲ್ಲಿ ಮೇವು ವಿತರಿಸಿ ವಿನೂತನ ಹುಟ್ಟು ಹಬ್ಬ ಆಚರಿಸುತ್ತಿದ್ದೇವೆ ಎಂದು ಬಿಜೆಪಿ ಯುವ ಧುರೀಣ, ಸಮೃದ್ಧಿ ಸೇವಾ ಸಂಸ್ಥೆ ಅಧ್ಯಕ್ಷ ವೀರೇಶ ಕಿವಡಸಣ್ಣವರ ಹೇಳಿದರು.

ಮಾಜಿ ಮುಖ್ಯಮಂತ್ರಿ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರ ಜನ್ಮದಿನದ ಅಂಗವಾಗಿ ಅವರ ನೇತೃತ್ವದಲ್ಲಿ ಇಂದು ಕೋಳಿಕಪ್ಪದ ಮಹಾವೀರ ವಿಹಾರಧಾಮ ಗೋ ಶಾಲೆಗೆ 5 ಟನ್ ಮೇವು(ಹೊಟ್ಟು) ವಿತರಿಸಿ ವಿನೂತನವಾಗಿ ಆಚರಿಸಿ ಮಾತನಾಡಿ ಇಂದು ಬರಗಾಲದಿಂದ ಎಷ್ಟೊ ಹಸುಗಳು ಮೇವು ಇಲ್ಲದೇ ಮೃತಪಟ್ಟಿವೆ. ಹಾಗಾಗಿ ಎಲ್ಲರೂ ಜಾನುವಾರಗಳ ಬಗ್ಗೆ ಕರುಣೆ ಇಟ್ಟುಕೊಂಡು ಅವುಗಳ ರಕ್ಷಣೆ ಮಾಡಲು ಮುಂದಾಗಬೇಕು ಎಂದರು.

ಗೋವುಗಳ ರಕ್ಷಣೆಗೆ ಎಲ್ಲರೂ ಹೋರಾಟ ಮಾಡುವ ಅವಶ್ಯಕತೆ ಇದೆ. ಅದರಲ್ಲಿ ವಿಶೇಷವಾಗಿ ಯುವಶಕ್ತಿಯ ಪಾತ್ರ ಬಹುಮುಖ್ಯ. ಯುವಕರು ಮುಂದೆ ಬಂದು ಗೋ ರಕ್ಷಿಸಬೇಕು ಎಂದರಲ್ಲದೇ ಹುಟ್ಟು ಹಬ್ಬದ ಹೆಸರಿನಲ್ಲಿ ಲಕ್ಷಾಂತ ರೂಪಾಯಿ ಮೋಜುಮಸ್ತಿಗೆ ಖರ್ಚು ಮಾಡುತ್ತಾರೆ. ಅದರ ಬದಲು ಗೋಶಾಲೆಗಳಿಗೆ ತಮಗೆ ಕೈಯಿಂದ ಎಷ್ಟಾಗುತ್ತೋ ಅಷ್ಟು ಹಣ ಅಥವಾ ಮೇವು ವಿತರಿಸಿದರೆ ಮೂಕಪ್ರಾಣಿಯ ಒಂದು ಜೀವ ಉಳಿಸಿದಂತಾಗುತ್ತದೆ ಎಂದರು.

ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಆಯು ಆರೋಗ್ಯ ಪಡೆಯಬೇಕು ಎಂದು ಆಶಿಸಿದರು.  ರಾಜೇಂದ್ರ ಜೈನ್ ಮಾತನಾಡಿ, ಬಿಜೆಪಿ ಘಟಕದ ವತಿಯಿಂದ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರ ಹುಟ್ಟು ಹಬ್ಬವನ್ನು ವಿನೂತನ ಆಚರಣೆ ಮಾಡಿದ್ದು ಸಂತೋಷವೆನಿಸಿದೆ.

ಗೋ ಶಾಲೆ ಅಧ್ಯಕ್ಷ ಜಬ್ಬರಚಂದ ಜೈನ್, ಹೇಮೇಂದ್ರ ಪೋರವಾಲ್, ಶೈಲೇಶ್ ಮೇತಾ, ವಿಕ್ರಂ ಜೈನ್, ಅಭಿಜಿತ್ ಶಾ, ವಿನಾಯಕ ಮದಲಬಾವಿ, ರಾಹುಲ ಕಾಕತಿಕರ, ಶಿವಕುಮಾರ ಮುನ್ನೊಳಿ, ರಘು ಪತ್ತಾರ ಸೇರಿದಂದತೆ ಬಿಜೆಪಿ ಹಾಗೂ ಗೋ ಶಾಲೆ ಸದಸ್ಯರು ಉಪಸ್ಥಿತರಿದ್ದರು.