SHARE

ಬೆಳಗಾವಿ:ಸುಪ್ರೀಂಕೋರ್ಟ್ ಇತ್ತೀಚೆಗೆ ಸರಕಾರಿ ಎಸ್ ಸಿ/ಎಸ್ ಟಿ  ನೌಕರರ ಮೀಸಲಾತಿ ರದ್ದುಗೊಳಿಸಿರುವುದನ್ನು ಮರು ಪರಿಶೀಲಿಸುವಂತೆ ಆಗ್ರಹಿಸಿ ಸರಕಾರಿ ನೌಕರರ ಸಂಘದ ಸದಸ್ಯರು ಇಂದು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿ ಡಿಸಿ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಲಾಯಿತು.

ರಾಜ್ಯ ಸರಕಾರ ಸುಪ್ರೀಂಕೋರ್ಟ್ ಎದುರು ಸಮರ್ಥವಾಗಿ ವಾದ ಮಾಡಿಸದ್ದರಿಂದ ವ್ಯತಿರಿಕ್ತ ತೀರ್ಪು ಬಂದಿರುವ ಸಾಧ್ಯತೆ  ಇದೆ ಎಂದು ಮನವಿಯಲ್ಲಿ ಉಲ್ಲೇಖಿಸಿದ್ದಾರೆ. ದುರ್ಗೇಶ ಮೇತ್ರಿ,  ಬಿ. ಆರ್. ಚನ್ನಯ್ಯನವರ, ಯಲ್ಲಪ್ಪ ಬಾಳಿಗಡ್ಡಿ, ರಾಹುಲ ಮೇತ್ರಿ, ಅರ್ಜುನ ದೇಮಟ್ಟಿ, ಗಜಾನನ ಕಾಂಬಳೆ ಇನ್ನಿತರರು ಉಪಸ್ಥಿತರಿದ್ದರು.