SHARE

ಬೆಳಗಾವಿ: ಕಿವುಡ ಮತ್ತು ಮೂಕ ವಿಶೇಷ ಚೇತನರು ಇಂದು ನಗರದ ಚನ್ನಮ್ಮ ವೃತ್ತದಲ್ಲಿ ಪೀಪಿ ಊದುವ ಮೂಲಕ ತಮಗೆ ಸರಕಾರದ ಸಹಾಯ ಸವಲತ್ತುಗಳು ಹಾಗೂ ವಿಶೇಷ ಭತ್ಯೆಗಳನ್ನು ಕೊಡಬೇಕೆಂದು ಆಗ್ರಹಿಸಿ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿ ಗೆ ಮನವಿ ಸಲ್ಲಿಸಿದರು. ಸುಮಾರು ನೂರಕ್ಕೂ ಹೆಚ್ಚು ಕಾರ್ಯಕರ್ತರು ಭಾಗವಹಿಸಿ ಗಮನ ಸೆಳೆದರು.

ಸ್ಪಂದಿಸದ ಸರಕಾರ: ನಾಲ್ಕು ವರ್ಷದಲ್ಲಿ ಏಳು ಬಾರಿ ರಾಜ್ಯಮಟ್ಟದಲ್ಲಿ ಕಿವುಡ ಮತ್ತು ಮೂಕರ ಸಂಘ ಹೋರಾಟ ಮಾಡಿದ್ದರೂ ಸರಕಾರ ಯಾವ ಕ್ರಮ ಕೈಗೊಂಡಿಲ್ಲ ಎಂದು ಸಂಘದ ರಾಜ್ಯ ಗೌರವಾಧ್ಯಕ್ಷ ತಿಳಿಸಿದರು.
ಬರುವ ರಾಜ್ಯ ಬಜೆಟ್ ನಲ್ಲಿ ಕಿವುಡ ಮೂಕರಿಗೆ ವಿಶೇಷ ಅನುದಾನ ಮತ್ತು ಮೀಸಲಾತಿ ಕೊಡಬೇಕು. ಮದುವೆ ಭತ್ಯೆ, ಪತಿ ಪತ್ನಿಗೆ ಒಂದೇ ಜಾಗದಲ್ಲಿ ಸೇವಾ ಸೌಲಭ್ಯ ವಿಶೇಷ ಭತ್ಯೆ ಸೇರಿ ಹಲವು ಬೇಡಿಕೆಗಳು ಕೇಳಿ ಬಂದವು.