SHARE

ಬೆಳಗಾವಿ:ಮುಂಬರುವ ಶಾಸಕ ಸ್ಥಾನದ  ಚುನಾವಣೆಗೆ ರಾಯಚೂರಿನಿಂದ ನಿಲ್ಲುತ್ತೇನೆ ಎಂಬುವುದು ಊಹಾಪೋಹ ಎಂದು ಶಾಸಕ ಸತೀಶ ಜಾರಕಿಹೊಳಿ ಪ್ರತಿಕ್ರಿಯಿಸಿದ್ದಾರೆ.ಮದುವೆ, ಖಾಸಗಿ ಕಾರ್ಯಕ್ರಮಗಳ ನಿಮಿತ್ತ ರಾಜ್ಯದ ಹಲವು ಜಿಲ್ಲೆಗಳಿಗೆ ಆಗಾಗ ಭೇಟಿ ನೀಡುತ್ತಲೇ ಇರುತ್ತೇನೆ ಹಾಗೆಯೇ ರಾಯಚೂರಿಗೂ ಹೋಗುತ್ತೇನೆ ಹೊರತು ಅಲ್ಲೇನು ನನ್ನದು ವಿಶೇಷ ಭೇಟಿ, ಚುನಾವಣೆ ತಯ್ಯಾರಿ ನಡೆದಿಲ್ಲ ಎಂದರು.

ಲಖನ್ ಜಾರಕಿಹೊಳಿ ಅವರಿಗೆ ಗೋಕಾಕನಲ್ಲೇ ಬೇಕಾದಷ್ಟು ಕೆಲಸಗಳು ಇವೆ. ಅವರು ರಾಜಕೀಯಕ್ಕೆ ಬರಲಿಕ್ಕಿಲ್ಲ. ಗೋಕಾಕನಲ್ಲೇ ಅವರಿಗೆ ಹೆಚ್ಚು ವರ್ಚಸ್ಸು ಇದೆ ಅಲ್ಲೇ ನಿಲ್ಲಲಿ. ಲಖನ್ ಅವರು ಯಮಕನಮರಡಿಗೆ ಚುನಾವಣೆ ನಿಲ್ಲುತ್ತಾರೆ ಎಂಬುವುದು ಸುಳ್ಳು. ನಾನೂ ಸಹ ರಾಯಚೂರಿಗೆ ಹೊರಟಿಲ್ಲ. ಹಾಗೇ ಹೇಳಿದವರನ್ನೇ ಮರುಪ್ರಶ್ನಿಸಿ ಎಂದು ಮಾಧ್ಯಮಗಳಿಗೆ ತಿಳಿಸಿದರು.