SHARE

ಬೆಳಗಾವಿ:ಮಹಿಳಾ ದಿನಾಚರಣೆ ಅಂಗವಾಗಿ ನಗರದ ವರಿಷ್ಠ ಮಹಿಳೆಯರು ಅತ್ಯಾಚಾರ ಪ್ರಕರಣಗಳು ಮತ್ತು ಹೆಚ್ಚಾಗಿರುವ ಮಹಿಳಾ ಶೋಷಣೆ ತಡೆಗಟ್ಟುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.ಮೇಯರ್ ಸಂಜೋತಾ ಬಾಂದೇಕರ ಹಾಗೂ ಮಾಜಿ ಮೇಯರ್ ಸರಿತಾ ಪಾಟೀಲ ನೇತೃತ್ವದಲ್ಲಿ ಸೇರಿಬಂದ ನೂರಾರು ಮಹಿಳೆಯರು ಇತ್ತೀಚಿನ ಕಾಕತಿ ಹೊರವೊಲಯದ ವೈದ್ಯಕೀಯ ವಿದ್ಯಾರ್ಥಿನಿ ಸಾಮೂಹಿಕ ಅತ್ಯಾಚಾರ ಪ್ರಕರಣ ಉಲ್ಲೇಖಿಸಿ ಆಕ್ರೋಶ ವ್ಯಕ್ತಪಡಿಸಿದರು.

ಜಿಲ್ಲಾಧಿಕಾರಿ ಎನ್. ಜಯರಾಮ ಮನವಿ ಸ್ವೀಕರಿಸಿ ಅಹಿತಕರ ಘಟನೆಗಳನ್ನು ಪೊಲೀಸರು ಸಮರ್ಥವಾಗಿ ನಿಭಾಯಿಸುತ್ತಿದ್ದು, ಸೂಕ್ತ ಕ್ರಮಕ್ಕಾಗಿ ಪೊಲೀಸ್ ಆಯುಕ್ತರಿಗೆ ಸೂಚಿಸಲಾಗುವುದು ಎಂದರು.ನೂರಾರು ಮಹಿಳೆಯರು ನಗರದ ಪ್ರಮುಖ ರಸ್ತೆಗಳಲ್ಲಿ ರ್ಯಾಲಿ ನಡೆಸಿದರು. ನಗರದ ಎಲ್ಲ ಬಿಸಿನೆಸ್ ಕ್ಷೇತ್ರದ ಮಹಿಳೆಯರು ಪ್ರತಿಭಟನೆಯಲ್ಲಿ ಬಾಯಿಗೆ ಕಪ್ಪು ಬಟ್ಟೆ ಧರಿಸಿ ಪ್ರತಿಭಟನೆ ಮಾಡಿದರು.