SHARE

ಬೆಳಗಾವಿ:ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿರುವ ನಗರ ಸಿಸಿಐಬಿ ತಂಡ ಮಾದಕ ವಸ್ತು ಮಾರಾಟಗಾರರನ್ನು ಬಂಧಿಸಿ, ಸಾಮಗ್ರಿಗಳನ್ನು ವಶಕ್ಕೆ ಪಡೆದಿದೆ.

ಮಂಗಳವಾರ ಸುದ್ದಿಗೋಷ್ಠಿಯಲ್ಲಿ ವಿಷಯ ತಿಳಿಸಿದ ಡಿಸಿಪಿ ಜಿ. ರಾಧಿಕಾ ಮಾ. 12 ರಂದು ನಗರದ ಶಹಾಪುರ ಹಟ್ಟಿಹೊಳಿ ಗಲ್ಲಿಯ ಆಶೀರ್ವಾದ ಎಲೆಕ್ಟ್ರಿಕಲ್ಸ್ ಅಂಗಡಿಯಲ್ಲಿ ಕದ್ದು ಮಾರುತ್ತಿದ್ದ ಮಾದಕ ವಸ್ತುಗಳನ್ನು ಪತ್ತೆ ಹಚ್ಚಲಾಗಿದೆ ಎಂದರು.3 ಕೆಜಿ 400 ಗ್ರಾಂ ಮೌಲ್ಯದ ಸನನ ವಟಿ ಮಿಶ್ರಿತ ಅಮಲು ಪದಾರ್ಥ ಸುಮಾರು 17 ಸಾವಿರ ಮೌಲ್ಯದ್ದು, ಅಮಲು ಮಿಶ್ರಿತ ಗೋಲಾಕಾರ ಮಾದರಿಯ ಸುಮಾರು 5 ಕೆಜಿಯಷ್ಟು ಮೌಲ್ಯ ಸುಮಾರು 27 ಸಾವಿರ, ತರಂಗ ಆಯುರ್ವೇದಿಕ ಔಷಧಿ ಹೆಸರಿನ 4_ಸಾವಿರ ಬೆಲೆಯ 900 ಗ್ರಾಂ.ನ ಪಾಕೆಟ್ ಗಳು, ಸುಪರ್ ಸ್ಟ್ರಾಂಗ್ ಹೆಸರಿಬ ಗೋಲಿಗಳು 150ಗ್ರಾಂ.ನ ಪಾಕೇಟ್ ಗಳು ದೊರೆತಿವೆ ಎಂದರು.ಪ್ರಕರಣದಲ್ಲಿ ತಂದೆ ಮಗನನ್ನು ವಶಕ್ಕೆ ಪಡೆಯಲಾಗಿದ್ದು ಮಂಡೋಳಿ ರಸ್ತೆಯ ಭವಾನಿ ನಗರದ ರಹವಾಸಿಗಳಾಗಿದ್ದಾರೆ. ಮುರಳಿ ಬಸವಂತಲಾಲಜಿ ಶರ್ಮಾ(64), ಮನೀಶ ಮುರಳಿ ಶರ್ಮಾ(39) ಅವರನ್ನು ವಶಕ್ಕೆ ಪಡೆಯಲಾಗಿದೆ.

ಮಧ್ಯಪ್ರದೇಶದ ಇಂದೋರನಿಂದ ಮೀನಾರ, ಸನನ, ತರಂಗವಟಿ, ಸುಪರ್ ಸ್ಟ್ರಾಂಗ್ ಪವರ್ ಹೆಸರು ಮುದ್ರಿತ ಪಾಕೇಟ್ ಗಳಲ್ಲಿ ಬರುತ್ತಿದ್ದವು ಎನ್ನಲಾಗಿದೆ. ಪರಿಚಿತ ಜನರು ಮತ್ತು ಮಾರವಾಡಿಗಳಿಗೆ ಈ ಮಾದಕ ವಸ್ತುಗಳನ್ನು ಮಾರುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಅಪರಾಧ ಮತ್ತು ಟ್ರಾಪಿಕ್ ವಿಭಾಗದ ಡಿಸಿಪಿ ಅಮರನಾಥರೆಡ್ಡಿ, ಸಿಸಿಐಬಿ ಇನ್ಸಪೆಕ್ಟರ್ ಎ. ಎಸ್. ಗುದಿಗೆಪ್ಪ, ಪಿಎಸ್ ಐ ಉದ್ದಪ್ಪ ಕಟ್ಟಿಕಾರ ಹಾಗೂ ಸಿಸಿಐಬಿ ಸಿಬ್ಬಂಧಿ ಭಾಗವಹಿಸಿದ್ದರು.