SHARE

ಬೆಳಗಾವಿ:ಅನಾಮಿಕ ಮೂಲಭೂತವಾದಿಯೊಬ್ಬ ಫೇಸಬುಕ್ ಗೋಡೆ ಮೇಲೆ ಹಾಕಿದ್ದ ರಾಷ್ಟ್ರಧ್ವಜದ ಮೇಲೆ ನಿಂತ ಚಿತ್ರಕ್ಕೆ ಲೈಕ್ ಮಾಡಿದ್ದಲ್ಲದೇ ಸ್ಕ್ರೀನ್ ಶಾಟ್ ಮಾಡಿ ವಾಟ್ಸಪ್ ನಲ್ಲಿ ಹರಿದಾಡಲು ಕಾರಣನಾಗಿದ್ದ ಮೋದಗಾ ಗ್ರಾಮದ ವ್ಯಕ್ತಿಯೊಬ್ಬನನ್ನು ಪೊಲೀಸರು ಮಂಗಳವಾರ ಸಂಜೆ ಬಂಧಿಸಿದ್ದಾರೆ.

ಮೋದಗಾ ಗ್ರಾ. ಪಂ. ಸದಸ್ಯೆಯ ಪತಿ ವೀರಾಸಾಬ ಮೌಲಾಸಾಬ ಯರಗಟ್ಟಿ ಎಂಬಾತ ಈಗ ದೇಶದ್ರೋಹ ಪ್ರಕರಣದೊಳಕ್ಕೆ ಸಿಕ್ಕಿಕೊಂಡಿದ್ದು, ಆತನ ಮೇಲೆ ಮಾರಿಹಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆತನು ಕಳಿಸಿದ್ದ ಚಿತ್ರ ಸ್ವೀಕರಿಸಿದ್ದ ‘ಮೋದಗಾ ಬುಲ್ಸ್’ ಗ್ರುಪಿನ್ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದ್ದು, ಅದರಲ್ಕಿನ ಸದಸ್ಯ ದೂರದ ಜಮ್ಮುಕಾಶ್ಮೀರದಲ್ಲಿರುವ ಸೈನಿಕನೊಬ್ಬ ಪೊಲೀಸರಿಗೆ ಮಾಹಿತಿ ನೀಡುವಂತೆ ಗ್ರಾಮಸ್ಥರಿಗೆ ತಿಳಿಸಿದ್ದಾನೆ.

ಜತೆಗೆ ಗ್ರಾಮಸ್ಥರು ಸಹ ಗ್ರಾ. ಪಂಚಾಯಿತಿ ಎದುರು ಪ್ರತಿಭಟನೆ ನಡೆಸಿದರು. ಪ್ರಕರಣಕ್ಕೆ ಸಂಬಂಧಿಸಿ ವೀರಾಸಾಬ ಮೌಲಾಸಾಬ ಯರಗಟ್ಟಿ ಎಂಬಾತನ ಮೇಲೆ 1971_ರ ರಾಷ್ಟ್ರೀಯ ಗೌರವಕ್ಕೆ ಧಕ್ಕೆ ಸೆಕ್ಷೆನ್ 2ರ ಕಾಯ್ದೆ ಅಡಿ ದೇಶದ್ರೋಹದ ಪ್ರಕರಣ ದಾಖಲಿಸಿ ನ್ಯಾಯಾಂಗ ಬಂಧನಕ್ಕೆ ಕಳಿಸಲಾಗಿದೆ. ದೇಶದ್ರೋಹದ ಚಿತ್ರ ಲೈಕ್ ಮಾಡಿದ್ದಲ್ಲದೇ ಅದನ್ನು ಇತರರಿಗೆ ನೋಡಲು ಪ್ರೇರೆಪಿಸಿ ಅಪಲೋಡ್ ಮಾಡಿದ ಆರೋಪವಿದೆ ಎಂದು ಡಿಸಿಪಿ ಜಿ. ರಾಧಿಕಾ ತಿಳಿಸಿದ್ದಾರೆ.

*ಎಚ್ಚರವಹಿಸಿ:* ಕಣ್ಣು ಮುಚ್ಚಿ ಫೇಸ್ ಬುಕ್ ಪೇಜ್ ಗಳಲ್ಲಿ ಲೈಕ್ ಮಾಡುವುದು, ವಾಟ್ಸಪ್ ನ ಅತಿಯಾದ ಚಿತ್ರವಿನಿಮಯ ಎಲ್ಲವೂ ಅಪಾಯಕ್ಕೆ ಕಾರಣವಾಗವುದು ಜನತೆ ಎಚ್ಚರವಹಿಸಬೇಕು ಎಂದು ಹಿರಿಯ ಅಧಿಕಾರಿಗಳು ಜನತೆಗೆ ಎಚ್ಚರಿಸಿದ್ದಾರೆ.