SHARE

ಬೆಳಗಾವಿ:ರೈತರ ಸಾಲಮನ್ನಾ ಮಾಡುತ್ತೇನೆಂದು ಹಲವು ಬಾರಿ ಸುದ್ದಿಮಾಡಿಕೊಂಡಿದ್ದ ಸಿದ್ದರಾಮಯ್ಯ ಭಂಡ ಘೋಷಣೆ ಮಾಡುವವರ ಲಿಸ್ಟ್ ಗೆ ಸೇರಿದ್ದಾರೆ ಎಂದು ಮಾಜಿ ಕೇಂದ್ರ ಸಚಿವ ಬಾಬಾಗೌಡ ಪಾಟೀಲ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಗುರುವಾರ ಜಿಲ್ಲಾಧಿಕಾರಿ ಕಚೇರಿ ಎದುರು ರೈತರೊಂದಿಗೆ ಪ್ರತಿಭಟನೆ ನಡೆಸಿ ರಾಜ್ಯ ಸರಕಾರ ಬರದಿಂದ ಕಂಗೆಟ್ಟ ರೈತರ ಸಾಲ ಮನ್ನಾ ಮಾಡುತ್ತದೆ ಎಂಬ ನಿರೀಕ್ಷೆ ಇತ್ತು ಆದರೆ ಸಿಎಂ ಬಜೆಟ್ ಭಾಷಣದಲ್ಲಿ ರೈತರ ಸಾಲ ಮನ್ನಾ ಬಗ್ಗೆ ಒಂದಕ್ಷರವನ್ನು ಮಾತಾಡಲಿಲ್ಲ. ಪ್ರಚಾರ ಮತ್ತು ಭಂಡತನಕ್ಕೆ ರೈತರನ್ನು ಉಪಯೋಗ ಮಾಡಿಕೊಳ್ಳುವಲ್ಲಿ ರಾಜಕೀಯ ನಾಯಕರು ನಿಸ್ಸೀಮರಾಗಿದ್ದಾರೆ. ಅಂಥ ಭಂಡತನವನ್ನು ಈಗ ಮುಖ್ಯಮಂತ್ರಿ ಸಿದ್ದರಾಮಯ್ಯ ತೋರಿಸಿದ್ದಾರೆ.

ರೈತರ ಎಲ್ಲ ಹಂತದ ಸಾಲ ಮನ್ನಾ ಮಾಡುವುದಾಗಿ ಆವಾಗವಾಗ ತಿಳಿಸಿದ್ದ ಮುಖ್ಯಮಂತ್ರಿ ಮಾತು ಇವತ್ತು ಏಕೆ ಉಳಿಯಲಿಲ್ಲ ಎಂದು ಪ್ರಶ್ನಿಸಿದರು. ಸಿದ್ದರಾಮಯ್ಯ ಮುಖ್ಯಮಂತ್ರಿ ಕುರ್ಚಿಯಿಂದ ಇಳಿಯಬೇಕು ಆ ಚಳುವಳಿ ಈಗಿಂದಲೇ ಪ್ರಾರಂಭವಾಯಿತು. ಬಹುಹಿಂದೆ
ವಿ. ಪಿ. ಸಿಂಗ್ ಮತ್ತು ಇತ್ತೀಚೆಗೆ ಪಿ. ಚಿದಂಬಂರಂ ರೈತರ ಸಾಲ ಮನ್ನಾ ಮಾಡಿದ್ದರು ಎಂದು ನೆನೆಸಿಕೊಂಡರು. ನೂರಾರು ರೈತರು ಭಾಗವಹಿಸಿದ್ದರು.