SHARE

ಬೆಳಗಾವಿ: ಇಂದಿರಾ ಪ್ರಿಯದರ್ಶಿನಿ ಗಾಂಧಿ ಚಾರಿಟೆಬಲ್ ಪೌಂಡೇಶನ್ ಶೇಡಬಾಳ ವತಿಯಿಂದ ಸಚಿವ ಆರ್. ವಿ. ದೇಶಪಾಂಡೆ ೬೯ ನೇ ಜನ್ಮದಿನದ ನಿಮಿತ್ತ ಉಚಿತ ನೇತ್ರ ತಪಾಸಣಾ ಹಾಗೂ ಶಸ್ತ್ರಚಿಕಿತ್ಸಾ ಶಿಬಿರ ಮಾ. ೧೬ ರಂದು ನಡೆಯಲಿದೆ.

ಮಾಧ್ಯಮಗಳಿಗೆ ಮಾಹಿತಿ ನೀಡಿದ ರಾಜ್ಯ ಕಾಂಗ್ರೆಸ್ ಕಾರ್ಮಿಕ ಘಟಕದ ಪ್ರಧಾನ ಕಾರ್ಯದರ್ಶಿ ಮಂಜುಳಾ ವಿಜಯಕುಮಾರ ಮುಕುಂದ ಗುರುವಾರ ಶೇಡಬಾಳದ ವರ್ಧಮಾನ ಪೇಟೆಯ ಇಂದಿರಾ ಪ್ರಿಯದರ್ಶಿನಿ ಗಾಂಧಿ ಚಾರಿಟೇಬಲ್ ಟ್ರಸ್ಟ್ ಆವರಣದಲ್ಲಿ ಬೆಳಿಗ್ಗೆ 9ರಿಂದ ಮಧ್ಯಾಹ್ನ 1ರವರೆಗೆ ಶಿಬಿರ ನಡೆಯಲಿದೆ. ಮಿರಜನ ವಿವೇಕಾನಂದ ನೇತ್ರಾಲಯ ಹಾಗೂ ಲಯನ್ಸ್ ನ್ಯಾಬ್ ಸಹಯೋಗದಲ್ಲಿ ಶಿಬಿರ ನಡೆಯಲಿದ್ದು ಅಗತ್ಯವಿದ್ದವರೆಗೆ ಹೆಚ್ಚಿನ ಚಿಕಿತ್ಸೆಯನ್ನು ನೀಡಲಾಗುವುದು. ರೋಗಿಗೆ ಉಚಿತ ಊಟೋಪಚಾರದ ಜತೆಗೆ ಮಿರಜವರೆಗೆ ವಾಹನ ವ್ಯವಸ್ಥೆ ಮಾಡಲಾಗಿದೆ. ಆಧಾರ ಕಾರ್ಡ್ ಮತ್ತು ರೇಷನ್ ಕಾರ್ಡ್ ಜತೆಗೆ ತರಬೇಕು ಎ೦ದು ತಿಳಿಸಿದ್ದಾರೆ. ಮಾಹಿತಿಗಾಗಿ ಮೊ. 9448519173 ಸಂಪರ್ಕಿಸಬಹುದು.