SHARE

ಬೆಳಗಾವಿ: ಮುಖ್ಯಮಂತ್ರಿ ಸಿದ್ದರಾಮಯ್ಯ ರೈತರ ಸಾಲ ಮನ್ನಾ ಮಾಡದೆ ‘ರೈತ ದ್ರೋಹಿ’ ಬಜೆಟ್ ಮಂಡನೆ ಮಾಡಿದ್ದಾರೆ ಎಂದು ರಾಜ್ಯ ಕಬ್ಬು ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ ಕುರುಬುರ ಶಾಂತಕುಮಾರ್ ಅಸಹನೆ ವ್ಯಕ್ತಪಡಿಸಿದರು.ಬುಧವಾರ ನಗರದ ‘ಸರ್ಕ್ಯೂಟ್ ಹೌಸ್’ನ ಸುದ್ದಿ ಗೋಷ್ಠಿಯಲ್ಲಿ ಮಾತನಾಡಿ ರಾಜ್ಯದಲ್ಲಿ ಸತತ ಮೂರು ಭಾರಿ ಭೀಕರವಾದ ಬರಗಾಲ ಎದುರಾಗಿದೆ.‌ ರೈತರು, ಗ್ರಾಮೀಣ ಶ್ರಮಿಕ ವರ್ಗ ನಗರಗಳಿಗೆ ಗುಳೆ ಹೋಗುತ್ತಿದ್ದಾರೆ. ಇಂಥ ಸಂದರ್ಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ರೈತರ ಮೇಲಿನ ಸಾಲ ಮನ್ನಾ ಮಾಡಬೇಕಿತ್ತು. ಆದರೆ ಸಾಲ ಮನ್ನಾ ಮಾಡುವೆ ಎಂದು ಹೇಳಿಕೊಂಡು ಕೊನೆಗೆ ‘ರೈತ ದ್ರೋಹಿ’ ಬಜೆಟ್ ಮಂಡಣೆ ಮಾಡಿದ್ದಾರೆ ಎಂದು ಅವರು ಆರೋಪಿಸಿದರು.

ಮೂವತೈದು ಸಾವಿರ ಕೋಟಿ ಸಾಲ ಮಾಡಿ ಬಜೆಟ್ ಮಂಡಿಸಿರುವ ರಾಜ್ಯ ಸರಕಾರಕ್ಕೆ ರೈತರ ಸಾಲ‌ಮನ್ನಾ ಮಾಡಿದ್ದರೆ ಹೆಚ್ಚಿನ ಹೋರೆಯೇನು ಆಗುತ್ತಿರಲಿಲ್ಲ. ಸಾಲಮನ್ನಾ ಮಾಡದೇ, ಸಿಎಂ ಕೃಷಿ ಕ್ಷೇತ್ರವನ್ನು ಅಪ್ಪಿಕೊಳ್ಳುವ ಯತ್ನ ಮಾಡಿದ್ದಾರೆ. ನಾಳೆ ಮಹಾರಾಷ್ಟ್ರದ ಸಾಂಗ್ಲಿಯಲ್ಲಿ ದೇಶದ 53ರೈತಪರ ಸಂಘಟನೆಗಳ ಮುಖಂಡರ ಸಭೆ ನಡೆಸಿ ರೈತರ ಸಾಲ ಮನ್ನಾ ಹಾಗೂ ಕೃಷಿ ಉತ್ಪನಗಳಿಗೆ ಡಾ. ಸ್ವಾಮಿನಾಥನ್ ವರದಿಯಂತೆ ರಾಜ್ಯ ಸರಕಾರ ಬೆಲೆ‌ನಿಗದಿ ಪಡಿಸಬೇಕೆಂದು ಹೋರಾಟ ಮಾಡಲು ಅಲ್ಲಿ ನಿಧ೯ರಿಸಲಾಗುವುದು ಎಂದು ಅವರು ಹೇಳಿದರು.

ರಾಜ್ಯದಲ್ಲಿ ಸುಮಾರು ಶೇ. 50ರಷ್ಟು ಕಬ್ಬಿನ ಬೆಳೆ ಉತ್ಪಾದನೆ ಕಡಿಮೆಯಾಗಿದೆ. ಪ್ರಸಕ್ತ ವಷ೯ದಲ್ಲಿ ಎರಡು ಕೋಟಿ ಹತ್ತು ಲಕ್ಷ ಟನ್ ಕಬ್ಬು ನುರಿಸಲಾಗಿದೆ. ಸಕ್ಕರೆ ಉತ್ಪಾದನೆ ಕಡಿಮೆಯಾಗಿದೆ. ಇದರಿಂದ ಸಕ್ಕರೆ ಬೆಲೆ ಗಗನಕ್ಕೇರಿದೆ. ರೈತರಿಗೂ ನ್ಯಾಯಯುತ ಬೆಲೆ ಸಿಗುತ್ತಿಲ್ಲ. ಕೇಂದ್ರ ಸರಕಾರ ವಿದೇಶದಿಂದ ಸಕ್ಕರೆ ಆಮದು ಮಾಡಿಕೊಳ್ಳುವುದನ್ನು ಬಿಟ್ಟು ಕಬ್ಬಿನ ಎಸ್ ಆರ್ ಪಿ ಬೆಲೆಯನ್ನು 9.5 ಇಳುವರಿಗೆ ಮೂರು ಸಾವಿರ ರೂ. ನಿಗದಿಗೊಳಿಸಿ. ರೈತರಿಗೆ ಉಚಿತ ಬೀಜ ಹಾಗೂ ಬಡ್ಡಿ ರಹಿತ ಸಾಲ ನೀಡುವ ಯೋಜನೆ ಜಾರಿಗೆ ತರಬೇಕೆಂದು ಒತ್ತಾಯಮಾಡಿದರು.