SHARE

ಬೆಳಗಾವಿ:ವಿಶ್ವೇಶ್ವರಯ್ಯ ತಾಂತ್ರಿಕ ವಿವಿ ಉಪನ್ಯಾಸಕನ ಅಪಹರಣ ಪ್ರಕರಣ ಇಂದು ನಗರದ ಜನರನ್ನು ಬೆಚ್ಚಿ ಬಿಳಿಸಿದೆ. ಹಾಡ ಹಗಲೇ ಸಿನಿಮಿಯ ರೀತಿಯಲ್ಲಿ 5 ಜನ ದುಷ್ಕರ್ಮಿಗಳು ನಗರದ ಆರ್ ಪಿಡಿ ವೃತ್ತದಿಂದ ಕಾರಿನಲ್ಲಿ ಎತ್ತಿ ಹಾಕಿಕೊಂಡು ಹೋಗಿದ್ದರು. ಖಚಿತ ಮಾಹಿತಿ ಮೇರೆಗೆ ತಕ್ಷಣ ಎಚ್ಚೆತ್ತ ಪೊಲೀಸರು ಕೇವಲ 2 ಗಂಟೆಯಲ್ಲಿ ಪ್ರಕರಣ ಸುಖಾಂತ್ಯಗೊಳಿಸಿದ್ದಾರೆ.

ಅಪಹರಣ: ಬೆಳಗ್ಗೆ 9.45ರ ಸಮಯಕ್ಕೆ ಆರ್ ಪಿ ಡಿ ವೃತ್ತದಿಂದ ಉಪನ್ಯಾಸಕನ್ನು ದುಷ್ಕರ್ಮಿಗಳು ಹೊತ್ತೊಯ್ಯುವಲ್ಲಿ ಯಶಸ್ವಿಯಾಗಿದ್ದರು. 2 ಗಂಟೆಯ ಅವಧಿಯೊಳಗೆ ಅಪಹರಣ ಪ್ರಕರಣಕ್ಕೆ ಪೊಲೀಸರು ಸುಖ್ಯಾಂತ ನೀಡಿದರು.  ಹೌದು , ಬೆಳ್ಳಂಬೆಳಿಗ್ಗೆ ನಗರದ ಆರ್ ಪಿಡಿ ವೃತ್ತದ ಬಳಿ ಬೈಕ್ ಮೇಲೆ ಬರುತ್ತಿದ್ದ ಉಪನ್ಯಾಸಕನ ಅಹಪರಣ ಕ್ಷುಲಕ್ ಜಗಳದ ರೂಪದಲ್ಲಿ ನಡೆದಿತ್ತು. ಅಷ್ಟಕ್ಕೂ ಇವರು ವಿಶ್ವೇಶ್ವರಯ್ಯ ತಾಂತ್ರಿಕ ವಿವಿಯ ಸ್ಪೇಶಲ್ ಆಫೀಸರ ಸುಧೀಂದ್ರ ಧೂಳಖೇಡ್ ಎಂಬವವರು.

ಬೈಕ್ ಗೆ ಢಿಕ್ಕಿ: ಕೆಲಸದ ನಿಮಿತ್ತ ಹೊರಟ್ಟಿದ್ದ ಉಪನ್ಯಾಸಕನಿಗೆ ಹಿಂದಿನಿಂದ ಬಂದ ದುಷ್ಕರ್ಮಿಗಳು ಬೈಕ್ ಡಿಕ್ಕಿ ಹೊಡೆದು ಜಗಳ ಆರಂಭಿಸಿದ್ದಾರೆ. ನಂತರ ಪೊಲೀಸ್ ಠಾಣೆಗೆ ಹೋಗೊಣ ನಡಿ ಎಂದು ಹೇಳಿ ಟವೆರಾ ವಾಹನ ಹತ್ತಿಸಿಕೊಂಡಿದ್ದಾರೆ. ನಂತರ ಬೈಲಹೊಂಗಲ ತಾಲೂಕಿನ ಹಣ್ಣೀಗೇರಿ ಗ್ರಾಮದ ಹೊರ ವಲಯದ ಮನೆಯೊಂದಕ್ಕೆ ಕರೆದುಕೊಂಡು ಹೋಗಿ 6 ಕೋಟಿ ಹಣ ಕೋಡು ಇಲ್ಲವಾದಲ್ಲಿ ನಿನ್ನನ್ನು ಕೊಲೆ ಮಾಡುವುದಾಗಿ ಬದರಿಕೆ ಹಾಕಿದ್ದಾರೆ. ಇನ್ನು ಈ ಅಪಹರಣ ಪ್ರಕರಣ ಕಣ್ಣಾರೆ ನೋಡಿದ್ದ ಸ್ಥಳೀಯ ಸಾರ್ವಜನಿಕರು ಟವೆರಾ ವಾಹನದ ನಂಬರ್ ಸಮೇತ ಪೊಲೀಸರಿಗೆ ಮಾಹಿತಿ ನೀಡಿದ್ದರು. ತಕ್ಷಣ ಅಲರ್ಟ್ ಆದ ಪೊಲೀಸರು ಸ್ಥಳಕ್ಕೆ ಆಗಮಿಸಿ ಬೈಕ್ ನಲ್ಲಿನ ದಾಖಲೆ ಪತ್ರಗಳನ್ನು ನೋಡಿದಾಗ ಅವರಿಗೆ ಗೊತ್ತಾಗಿದ್ದು ಅಹಪರಣ ಆಗಿದ್ದ ಉಪನ್ಯಾಸಕ ಹಾಗೂ ಅಧಿಕಾರಿ ಸುಧೀಂದ್ರ ಧೂಳಖೇಡ್ ಅನ್ನುವುದು. ತಕ್ಷಣ ನಗರದಲ್ಲಿ ನಾಖಾ ಬಂಧಿ ರಚಿಸಿಕೊಂಡು ಆರೋಗಪಿಗಳ ಪತ್ತೆಗೆ ಬೆನ್ನತ್ತಿದ್ದರು. ಕೇವಲ ಎರಡೇ ಗಂಟೆಯಲ್ಲಿ ಅಪಹರಣಕಾರರಿಂದ ಉಪನ್ಯಾಸಕರನ್ನು ಬಿಡುಗಡೆಗೊಳಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಅಹಪರಣ ಪ್ರಕರಣ ಸಂಬಂಧ ಮೂರು ಜನ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದು ಇನ್ನಿಬ್ಬರು ಪರಾರಿಯಾಗಿದ್ದಾರೆ. ವಿಟಿಯು ಸಿಬ್ಬಂಧಿಗಳಾದ ಅಶೋಕ್ ಮತ್ತಿಕೊಪ್ಪ, ಭೀಮಪ್ಪ ನಾಯಕ್ ಎಂಬುವವರೇ ಬಂಧಿತರು.

ಖಾಯಂ ಮಾಡುವ ಹುಸಿ ಭರವಸೆ: ಜತೆಗೆ ಈ ಅಪಹರಣ ಪ್ರಕರಣದ ಹಿಂದೆ ವಿಟಿಯು ಗುತ್ತಿಗೆ ನೌಕರರ ಖಾಯಂ ಪ್ರಕ್ರಿಯೆ ಇದೆ. ವಿಟಿಯುನಲ್ಲಿ 300ಕ್ಕೂ ಜನ ಗುತ್ತಿಗೆ ಆಧಾರ ಮೇಲೆ ನೌಕರರು ಕೆಲಸ ಮಾಡುತ್ತಿದ್ದರು. ಈ ಕೆಲಸಗಾರರನನ್ನು ಖಾಯಂಗೊಳಿಸುವುದಾಗಿ ಹೇಳಿ ಉಪನ್ಯಾಸಕ ಸುಧೀಂದ್ರ ಧೂಳಖೆಡ್ ಹಾಗೂ 11 ಜನ 6 ಕೋಟಿ ಹಣ ತೆಗೆದುಕೊಂಡಿದ್ದಾರೆ. ಈ ಹಣ ವಾಪಸ್ ಕೊಡುವಂತೆ ಅಶೋಕ್ ಮತ್ತಿಕೊಪ್ಪ ಆಗಾಗ ಕೇಳುತ್ತಿದ್ದನು. ಜತೆಗೆ ಸುಧೀಂಧ್ರ ಧೂಳಖೇಡ್ ಸೇರಿ 11 ಜನರ ವಿರುದ್ಧ ವಂಚನೆ ಪ್ರಕರಣ ಅಡಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಈ ಪ್ರಕರಣ ಇನ್ನೂ ವಿಚಾರಣೆ ಹಂತದಲ್ಲಿಯೇ ಇರುವಾಗಲೇ ಅಪಹರಣ ಪ್ರಕರಣ ನಡೆದಿದೆ.

ಮೋಸವಾಗಿದೆ..? ಆರೋಪ : ಇನ್ನೂ ಅಪಹರಣ ಪ್ರಕರಣದ ಆರೋಪಿ ಅಶೋಕ ಮತ್ತಿಕೊಪ್ಪ, ಉಪನ್ಯಾಸಕ ಸುಧೀಂದ್ರ ಧೂಳಖೇಡ್ ನನಗೆ ಮೋಸ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ. ಇನ್ನೂ ಈ ಬಗ್ಗೆ ಬೆಳಗಾವಿಯ ಟಿಳಕವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಒಟ್ಟಾರೆ ಬೆಳಗಾವಿಯಲ್ಲಿ ನಡೆದ ಅಹಪರಣ ಪ್ರಕರಣ ಸುಖಾಂತ್ಯ ಕಂಡಿದೆ. ಇದರ ಹಿಂದಿನ ಹಣಕಾಸಿನ ಅವ್ಯವಹಾರದ ಭಾಸ ಈಗ ಸಂಪೂರ್ಣ ತನಿಖೆಗೆ ಒಳಗಾಗುವ ಲಕ್ಷಣವಿದೆ.