SHARE

ಬೆಳಗಾವಿ:ನಗರದ ವಡಗಾವಿ ಪ್ರದೇಶದ ಮಂಗಾಯಿ ನಗರದ ಕೊಳಗೇರಿಯಲ್ಲಿ 35 ಲಕ್ಷ ರೂ.ಗಳ ಸಮುದಾಯ ಭವನ ನಿರ್ಮಾಣ ಮಾಡುತ್ತಿದ್ದು, ಕಳೆದ ಒಂದು ವರ್ಷದಿಂದ ಸಮುದಾಯ ಭವನವನ್ನು ಕಳಪೆಯಾಗಿ ನಿರ್ಮಾಣ ಮಾಡಲಾಗುತ್ತಿದೆ ಎಂದು ಸ್ಥಳೀಯ ಮಹಿಳೆಯರು ಡಿಸಿ ಕಚೇರಿ ಎದುರು ಪ್ರತಿಭಡನೆ ನಡೆಸಿದರು.

ಸದರಿ ಕಟ್ಟಡದ ಕ್ಯೂಯರಿಂಗ್ ಆಗಿಲ್ಲ, ಸುಣ್ಣ ಬಣ್ಣ ಬಳಿದಿಲ್ಲ, ಕರೆಂಟ್, ಶೌಚಾಲಯ, ಒಳಚರಂಡಿ ಏನಿಲ್ಲ. ಎಲ್ಲವೂ ಕಳಪೆ ಕಾಮಗಾರಿ ಆಗಿದೆ. ಸದರಿ ಕಟ್ಟಡದ ಗುತ್ತಿಗೆದಾರ ಸಹಾಯಕ ಕಾರ್ಯಪಾಲಕ ಎಂಜಿನೀಯರ್ ಅವರನ್ನು ಹೆದರಿಸಿ ಅಂತಿಮ ಬಿಲ್ ಪಡೆದಿದ್ದಾರೆ ಎಂಬ ಆರೋಪವಿದೆ. ಬಡ ಜನರ ಅನುಕೂಲಕ್ಕಾಗಿ ಬಿಡುಗಡೆಯಾದ ಸಮುದಾಯ ಭವನದ ಗುಣಮಟ್ಟದ ಕಾಮಗಾರಿ ಮಾಡಿಸಬೇಕು, ಗುತ್ತಿಗೆದಾರ ಶಿವಾನಂದ ಕಾಕತಿಕರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದರು.