SHARE

ಬೆಳಗಾವಿ: ನಿಶ್ಚಿತಾರ್ಥವಾಗಿದ್ದ ಹುಡುಗಿಯೊಂದಿಗೆ ಬೆಳಗಾವಿ ಮೂಲದ ಮುಂಬೈನಲ್ಲಿ ಉದ್ಯೋಗಿಯಾಗಿರುವ ಹುಡುಗನೊಬ್ಬ ಮದುವೆಯಾಗಲು ನಿರಾಕರಿಸಿದ ಹಿನ್ನೆಲೆಯಲ್ಲಿ ಇಂದು ಕ್ಯಾಂಪ್ ಪೊಲೀಸ್ ಠಾಣೆ ಎದುರು ಹುಡುಗಿ ವಿಷ ಸೇವಿಸಿದ್ದು ಚಿಕಿತ್ಸೆಗೆ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.

ಗಣೇಶಪುರದ ಮೇದಾರ ಸಮುದಾಯದ ಶೃತಿ ಗೋಕಾಕ(22) ಆತ್ಮಹತ್ಯೆಗೆ ಯತ್ನಿಸಿದವಳು. ಮುಂಬೈನಲ್ಲಿ ಉದ್ಯೋಗದಲ್ಲಿರುವ ಹುಡುಗ ವಿನಾಯಕ ಕುಂದಗೋಳನ ಜತೆಗೆ ನವೆಂಬರ್ ನಲ್ಲಿ ಎಂಗೇಜಮೆಂಟ್ ಆಗಿತ್ತು. ಅಪ್ಪ, ಅಮ್ಮ ಮತ್ತು ಶೃತಿ ಬಂದು ಡಿಸಿಪಿ ಜಿ. ರಾಧಿಕಾ ಅವರನ್ನು ಭೇಟಿಯಾಗಿ ಸಮಸ್ಯೆ ವಿವರಿಸಿದ್ದರು.

ಇಂದು ಬೆಳಿಗ್ಗೆ ಶೃತಿ ದೂರು ಕೊಡಲು ಠಾಣೆಗೆ ಆಗಮಿಸಿ ಹಠಾತ್  ವಿಷ ಸೇವನೆಗೆ ಒಳಗಾಗಿದ್ದಾಳೆ.
ನವೆಂಬರ್ ನಲ್ಲಿ ನಿಶ್ಚಿತಾರ್ಥವಾಗಿ ಮದುವೆ ಡಿಸೆಂಬರ್ ನಲ್ಲಿ ಇತ್ತು. ಮದುವೆ ನಿರಾಕರಣೆ ಹಿನ್ನೆಲೆಯಲ್ಲಿ ಈ ಘಟನೆ ನಡೆದಿದೆ. ಯುವತಿಯನ್ನು ಜಿಲ್ಲಾಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಲಾಗಿದೆ. ಆಕೆಯ ತಂದೆ ಕೊಡುವ ಮಾಹಿತಿ ಮೇರೆಗೆ  ಕ್ಯಾಂಪ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗುವುದು ಎಂದು ಡಿಸಿಪಿ ಜಿ. ರಾಧಿಕಾ ತಿಳಿಸಿದ್ದಾರೆ.