SHARE

ಬೆಳಗಾವಿ: ನರೇಗಾ ಯೋಜನೆಯಡಿ ದುಡಿಯುವ ಕಾರ್ಮಿಕರಿಗೆ 15 ದಿನಗಳೊಳಗೆ ಕೂಲಿ ಸಂದಾಯ ಮಾಡದಿದ್ದರೆ ಸಂಬಂಧಿಸಿದ ಅಧಿಕಾರಿಗಳ ಸಂಬಳದಲ್ಲಿ ಕಟ್ ಮಾಡಿ ಬಡ್ಡಿ ಕೊಡಲಾಗುವುದು ಎಂದು ಸಚಿವ ಎಚ್. ಕೆ. ಪಾಟೀಲ ಎಚ್ಚರಿಸಿದರು.

ಇಓ, ಎಡಿಓ ಮತ್ತು ಪಿಡಿಓಗಳು 15 ದಿನದಲ್ಲಿ ಕೂಲಿ ಸಂದಾಯ ಮಾಡದಿದ್ದರೆ ಅವರ ಸಂಬಳ ಕಟ್ ಮಾಡಿ ಸುಮಾರು 0.05 ಬಡ್ಡಿ ಕಾರ್ಮಿಕರಿಗೆ ಸಂದಾಯ ಮಾಡಲಾಗುವುದು. 100ರ ಆಸುಪಾಸು ಸಂಖ್ಯೆಯಲ್ಲಿ ದುಡಿಯುವ ಕಾರ್ಮಿಕರ ಸೈಟ್ ಗೆ ವೈದ್ಯರೊಬ್ಬರನ್ನು ತಪಾಸಣೆಗೆ ನಿಯೋಜಿಸಬೇಕು. ಕಾರ್ಮಿಕರ ಆರೋಗ್ಯ ರಕ್ಷಣೆಯೂ ಅಧಿಕಾರಿಗಳ ಕರ್ತವ್ಯ ಎಂದರು. ಸರಕಾರವೇ ಅನುದಾನ ಕೊಟ್ಟಿಲ್ಲ ಎಂದಾದರೆ ನಾವೇ(ಸರಕಾರ) 0.05 ರಷ್ಟು ಬಡ್ಡಿ ಸಂದಾಯ ಮಾಡುತ್ತೇವೆ ಎಂದರು.