SHARE

ಬೆಳಗಾವಿ: ನಾನು ಗಡಿ ಸಚಿವನಾಗಿ ಜವಾಬ್ದಾರಿ ವಹಿಸಿಕೊಂಡಾಗ ‘ಬೆಳಗಾವಿ’ ನಮ್ಮದು ಎಂದು ಸೆರಿನ್ ಸಮಿತಿ ಎದುರು ಸಾಕ್ಷಿ ಕ್ರೋಢಿಕರಿಸುವ ಅನಿವಾರ್ಯತೆ ಇತ್ತು. ಆದರೆ ಈಗ ಪರಿಸ್ಥಿತಿ ರಾಜ್ಯದ ಹಿತಾಸಕ್ತಿಯೆಡೆಗೆ ಸಾಕಷ್ಟು ಬದಲಾಗಿ ಚೇತರಿಕೆ ಕಂಡಿದೆ.

ಸುಪ್ರೀಂಕೋರ್ಟ್ ಕಾನೂನಾತ್ಮಕ ಒಲವು ತೋರುತ್ತಿದೆ. ಗಡಿ ಚರ್ಚೆ ಮತ್ತು ನಿರ್ಧಾರ ಸಂಪೂರ್ಣ ಸಂಸತ್ತಿನ ಅಧಿಕಾರವಾಗಿದೆ. ಗಡಿ ವಿಚಾರದಲ್ಲಿ ನಾನು ಬಹಳ ಕ್ರೀಯಾಶೀಲ ಮತ್ತು ಗಂಭೀರವಾಗಿದ್ದೇನೆ. ರಾಜ್ಯಕ್ಕೆ ಈಗ ನೈತಿಕ ಒಲವು ಸಿಕ್ಕಿದೆ. ಸಂಸತ್ತಿಗೆ ಅಧಿಕಾರ ಇದೆ ಹೊರತು ಸುಪ್ರೀಕೋರ್ಟ್ ಗೆ ಗಡಿ ಚರ್ಚೆ, ನಿರ್ಧಾರದ ಹಕ್ಕು, ಅಧಿಕಾರ ಇಲ್ಲ ಎಂದು constitutional validity ಅನ್ನೇ ಕರ್ನಾಟಕ ಪ್ರಶ್ನಿಸಿತ್ತು. ಮಹಾರಾಷ್ಟ್ರ ಮನವಿ ಮೇರೆಗೆ ಸುಪ್ರೀಕೋರ್ಟನಿಂದ ರಚನೆಯಾಗಿದ್ದ ಸೆರಿನ್ ಕಮಿಟಿ ಎದುರು ಸಾಕ್ಷಿ ಕೊಡುವ ಅವಶ್ಯಕತೆ ಈಗ ಕರ್ನಾಟಕಕ್ಕೆ ಇಲ್ಲ. ಸಿರೆನ್ ಕಮಿಟಿ ಬದಿಗೊತ್ತಿ ಸಂವಿಧಾನಾತ್ಮಕ ವಿಚಾರಣೆಗೆ ಸುಪ್ರೀಂಕೋರ್ಟ್ ಮುಂದಾಗಿದೆ ಎಂದರು.

ಗಡಿ ವಿಚಾರದಲ್ಲಿ ಎಲ್ಲ ಪ್ರಯತ್ನಗಳು ನಡೆದಿದ್ದು ಇಲ್ಲಿನ ಕನ್ನಡ ಹೋರಾಟಗಾರರೊಂದಿಗೆ ಸತತ ಸಂಪರ್ಕದಲ್ಲಿದ್ದೇನೆ ಎಂದರು. ಸುಪ್ರೀಂ ಕೋರ್ಟ್ ಗಡಿ ವಿಚಾರ ಆಲಿಸಬಹುದೇ, ನಿರ್ಣಯ ಪ್ರಕಟಿಸಬಹುದೇ ಎಂಬ ಅದರ ಅಧಿಕಾರ ವ್ಯಾಪ್ತಿಯ ಚರ್ಚೆ ಈಗ ಶುರುವಾಗಿದೆ.

ಕರ್ನಾಟಕದ ಮೇಲಿನ ಕತ್ತಿ ಅಲುಗು ಸರಿದಿದೆ. ಸುಪ್ರೀಂ ಕೋರ್ಟ್ ನಲ್ಲಿ ನಮಗೆ ಕಾನೂನಾತ್ಮಕ ನೈತಿಕ ಬೆಂಬಲ ಸಿಕ್ಕಿದೆ. ಸೆರಿನ್ ಸಮಿತಿ ಎದುರು ಬೆಳಗಾವಿ ಸೇರಿದಂತೆ ಇತರ ಊರುಗಳು ನಮ್ಮವೇ ಎಂದು ಸಾಕ್ಷಿ ಹೇಳಿಕೊಳ್ಳುವ ಅಂಜಿಕೆ ಆತಂಕ ಆವಾಗ ಇತ್ತು. ಅದು ಈಗ ಇಲ್ಲ ಎಂದು ತೆರೆ ಎಳೆದರು.