SHARE

ಬೆಳಗಾವಿ: ನರೇಗಾ ಯೋಜನೆ ಪರಿಣಾಮಕಾರಿಯಾಗಿ ಜಾರಿಗೆ ತರದ ಜಿಪಂ ಯೋಜನಾ ನಿರ್ದೇಶಕ(PD) ಹೊಸಮನಿ ಅವರನ್ನು ಸಚಿವ ಎಚ್. ಕೆ. ಪಾಟೀಲ ತೀವೃ ತರಾಟೆಗೆ ತೆಗೆದುಕೊಂಡರು. ಬರುವ ಜೂನ್ ಒಳಗೆ ಯೋಜನೆ ಶೇ. 100ರಷ್ಟು ಸಾಧನೆ ಮಾಡದಿದ್ದರೆ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದರು.

ಹೊಸಮನಿ ಅವರ ಕಾರ್ಯವೈಖರಿ ಮೇಲೆ ನಿಗಾ ಇಡುವಂತೆ ಗ್ರಾಮೀಣಾಭಿವೃದ್ಧಿ ಕಮಿಷ್ನರ್ ಪ್ರಕಾಶ ಹಾಗೂ ಜಿಪಂ. ಸಿಇಓ ಡಾ. ರಾಮಚಂದ್ರನ್ ಅವರಿಗೆ ಸೂಚಿಸಿದರು. ನರೇಗಾ ಯೋಜನೆ ಪರಿಣಾಮಕಾರಿಯಾಗಿ ಜಾರಿ ಮಾಡದ ಬಗ್ಗೆ ಹಲವು ಬಾರಿ ಕೇಳಿದರು ಮೌನವಾಗಿ ನಿಂತಿದ್ದ ಅಧಿಕಾರಿ ನಡೆ ವಿಸ್ಮಯ ಮೂಡಿಸಿತು. You are an irresponsible officer ಎಂದು ನಾಲ್ಕಾರು ಬಾರಿ ಉದ್ಘರಿಸಿ ಅಸಮಧಾನ ವ್ಯಕ್ತಪಡಿಸಿದ್ದು ನಿಮ್ಮ ಕರ್ತವ್ಯಬದ್ಧತೆ ಏನೇನು ಇಲ್ಲ I am sorry , I can’t help you. Disciplinary action will be initiated against you ಎಂದು ಕುಳ್ಳಿರಿಸಿದರು.