SHARE

ಬೆಳಗಾವಿ:ರಾಜ್ಯ ಸರಕಾರ ಎಪ್ರೀಲ್ 10 ರಂದು ಅಂಗನವಾಡಿ ನೌಕರರ ಬೇಡಿಕೆಗಳನ್ನು ಪುರಸ್ಕರಿಸಿ ಸ್ಪಂದಿಸದಿದ್ದರೆ, ಏ. 11 ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮನೆಗೆ ಮುತ್ತಿಗೆ ಹಾಕಲಾಗುವುದು ಎಂದು ಅಂಗನವಾಡಿ ಜಿಲ್ಲಾಧ್ಯಕ್ಷೆ ದೊಡ್ಡವ್ವ ಪೂಜಾರಿ ಹಾಗೂ ಕಾರ್ಯದರ್ಶಿ ಜಿ. ಎಂ. ಜೈನೆಖಾನ ತಿಳಿಸಿದರು.

ಈಗಾಗಲೇ 4 ದಿನ ಮಾರ್ಚ್ ತಿಂಗಳಲ್ಲಿ ಬೆಂಗಳೂರಿನಲ್ಲಿ ಅಂಗನವಾಡಿ ಕಾರ್ಯಕರ್ತರ ಪ್ರತಿಭಟನೆ ನಡೆಸಿತು. ಅದರಂತೆ ಸ್ವತಃ ಸರಕಾರವೇ ಏ. 10 ರಂದು ಬೇಡಿಕೆಗೆ ಸ್ಪಂದಿಸುವ ಬಗ್ಗೆ ತನ್ನ ಸ್ಪಷ್ಠ ನಿರ್ಧಾರ ಪ್ರಕಟಿಸಿದ್ದರಿಂದ ನಾವೆಲ್ಲ ಪ್ರತಿಭಟನೆ ಹಿಂತೆಗೆದುಕೊಳ್ಳಲಾಗಿದೆ.
ರಾಜ್ಯದಲ್ಲಿ 1975 ರ ನಂತರ ICDS ಯೋಜನೆ ಪ್ರಾರಂಭವಾಗಿ 1.24 ಲಕ್ಷ ಬಡ ಮಹಿಳೆಯರು ಅಂಗನವಾಡಿಗಳಲ್ಲಿ ದುಡಿಯುತ್ತಿದ್ದಾರೆ. ಗ್ರಾಮೀಣ ಮಟ್ಟದಲ್ಲಿ ಸರಕಾರದ ಯೋಜನೆಗಳಾದ ಸ್ತ್ರೀಶಕ್ತಿ ಗುಂಪು ರಚನೆ, ಭಾಗ್ಯಲಕ್ಷ್ಮೀ ಯೋಜನೆ, , ಚುನಾವಣೆ, ಬಿಪಿಎಲ್ ಕಾರ್ಡ್, ಊರಿನ ಸರ್ವೇ, ಆಧಾರ ಕಾರ್ಡ್, ಆರೋಗ್ಯ ಯೋಜನೆಗಳ ಸೇರಿ ಎಲ್ಲ ಕೆಲಸ ಮಾಡಿಸುತ್ತಾರೆ. ಆದರೆ ಕನಿಷ್ಠ ವೇತನ, ಕೆಲಸದ ಭದ್ರತೆ ಕೊಡಲು ಮಾತ್ರ ಆಗೋದಿಲ್ಲ ಎನ್ನುತ್ತಾರೆ ಎಂದು ಆರೋಪಿಸಿದ್ದಾರೆ. ಸುಮಾರು 18 ಸಾವಿರ ಸಂಬಳ, ಕೆಲಸದ ಭದ್ರತೆ, ಪಿಂಚಣಿ ಯೋಜನೆ, ಆರೋಗ್ಯ ಯೋಜನೆಗಳನ್ನು ಖಾತರಿಪಡಿಸಲು ಬೇಡಿಕೆ ಇಟ್ಟರು.

ಗೋಧಾವರಿ ರಾಜಾಪುರೆ, ಜಿ. ಎ. ಜೈನೆಖಾನ, ಸರಸ್ವತಿ ಮಾಳಶೆಟ್ಟಿ, ವಿಧ್ಯಾ ಕಂಬಾರ, ಮನಿರಾ ಮುಲ್ಲಾ, ಗೌರವ್ವ ಮಡಿವಾಳರ, ಸಿ. ಎಸ್. ಮಗದುಮ, ಶೈಲಾ ಮಾಳಿ, ಚನ್ನಮ್ಮ ಗಡಕರಿ, ಮಂದಾ ನೇವಗಿ ಇತರರು ಭಾಗವಹಿಸಿದ್ದರು.