SHARE

thebelgaumnews.com Impact

ಬೆಳಗಾವಿ: ಸಂಬಳವಿಲ್ಲದೆ ಸುಣ್ಣಬಣ್ಣದ ಲೆಕ್ಕಕ್ಕೆ ಸೇರಿದ್ದ ನಗರ ದಕ್ಷಿಣ ಭಾಗದ ಜಲಮಂಡಳಿ ವಾಲ್ವಮೆನ್ ಗಳಿಗೆ ಸಂಬಳದ ಚೆಕ್ ಸಂದಾಯವಾಗಿದೆ.

ಕಳೆದ ಆಗಸ್ಟನಿಂದ ಸಂಬಳವಿಲ್ಲದೇ ಪರಿತಾಪ ಅನುಭವಿಸುತ್ತಿದ್ದ ಸಿಬ್ಬಂಧಿಯ ಅಸಮಧಾನದ ಪ್ರತಿಭಟನೆ ಬಗ್ಗೆ ‘ಬೆಲಗಾಮ್ ನಿವ್ಸ್ ಡಾಟ್ ಕಾಮ್’ (thebelgaumnews.com)ಸುದ್ದಿ ಪ್ರಕಟಿಸಿತ್ತು.
ದಕ್ಷಿಣ ಭಾಗದ ವಾಲ್ವಮೆನ್ ಗಳಿಗೆ ಜಲಮಂಡಳಿಯ ಅಧಿಕಾರಿಗಳು ಶುಕ್ರವಾರ ಸಂಜೆಯೇ ಗುತ್ತಿಗೆದಾರರ ಮೂಲಕ ಚೆಕ್‌ ಆದ್ಯತೆ ಮೇರೆಗೆ ನೀಡಿದ್ದಾರೆ.
ಕಳೆದ ಏಳು ತಿಂಗಳಿನಿಂದ ದಕ್ಷಿಣ ಭಾಗದ ವಾಲ್ವಮೆನಗಳಿಗೆ ಸರಿಯಾಗಿ ಸಂಬಳ ನೀಡುತ್ತಿಲ್ಲ. ಅರಿಯರ್ಸ್ ಸಹ ನೀಡಿಲ್ಲ. ಉತ್ತರ ಭಾಗದ ವಾಲ್ವಮೆನ್ಗಳಿಗೆ ಮಾತ್ರ ಎಲ್ಲ ಸೌಕಯ೯ ನೀಡುತ್ತಿದೆ. ಒಂದೇ ಮಂಡಳಿಯಲ್ಲಿ ಸುಣ್ಣಬಣ್ಣದ ಮಲತಾಯಿ ಧೋರಣೆಯಾಗುತ್ತಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದ್ದರು.
ಗುತ್ತಿಗೆದಾರರ ಮುಖಾಂತರ ಚೆಕ್ ವಿತರಿಸಿದ ಜಲಮಂಡಳಿಯ ಅಧಿಕಾರಿಗಳು ಸದ್ಯ‌ ಗುಮ್ಮಟವಾಳದಲ್ಲಿ ಅವರ ಸಮಸ್ಯೆ‌ ಬಗೆ ಹರಿಸಲು ಸಭೆ ಕರೆದಿದ್ದಾರೆ.
ಮಂಜುನಾಥ‌ ದೊಡವಾಡ, ಸುಬ್ರಹ್ಮಣ್ಯ ಕಾಂಬಳೆ, ಸಿದ್ರಾಮ ತಳವಾತ, ವಿಠ್ಠಲ ಕಾಂಬಳೆ, ಸಂತೋಶ ಸಿಗೋಳಿ, ಕುಂತಿನಾಥ ಬುಡವಿ, ಬಸು ಕುಡಚಿಕರ, ಷರಿಪ್ ಮುಲ್ಲಾ ಅವರ ಹೋರಾಟಕ್ಕೆ ಜಯ ಸಿಕ್ಕಿದೆ.