SHARE

ಬೆಳಗಾವಿ: ಆರ್.ಟಿ.ಓ, ಪೊಲೀಸ್ ಹಾಗೂ ರಸ್ತೆ ಸುರಕ್ಷತಾ ಪ್ರಾಧಿಕಾರದ ನಿಯಮಗಳನ್ನು ಗಾಳಿಗೆ ತೂರಿ ಮನಬಂದಂತೆ ವರ್ತಿಸುವ ‘ಪುಢಾರಿ’ ಗಳಿಗೆ ನಗರ ಪೊಲೀಸರು ಬ್ರೆಕ್ ಹಾಕುವ ಸಿದ್ಧತೆ ನಡೆಸಿದ್ದಾರೆ.ಟ್ರಾಫಿಕ್ ನಿಯಮಗಳನ್ನು ಮೀರಿ ಇಲ್ಲದ ದೊಡ್ಡಸ್ಥಿಕೆ ತೋರಿಸಲು ಅಳವಡಿಸಿಕೊಳ್ಳುವ Police, Press, Defence, Army, ex-Army, ಬೋರ್ಡ ನಿಗಮ ಮತ್ತು ಸರಕಾರದ ಹೆಸರು ತಮ್ಮ ವಾಹನಗಳ ಮೇಲೆ ಬಳಸುವವರ ವಾಹನಗಳನ್ನು ತಪಾಸಿಸಲು ನಗರ ಪೊಲೀಸ್ ಕ್ರೈಂ ಮತ್ತು ಟ್ರಾಫಿಕ್ ವಿಭಾಗ ಮನಸ್ಸು ಮಾಡಿದೆ.

ಪತ್ರಕರ್ತ, ಪೊಲೀಸ್ ಮತ್ತು ನಿಗದಿತ ಅಥಾರಿಟಿ ಇಲ್ಲದ ನಾಗರಿಕರು ಪ್ರತಿಷ್ಠೆಗಾಗಿ ಇಲ್ಲವೇ ಸಂಚಾರ ನಿಯಮಗಳನ್ನು ಮುರಿದು ಒತ್ತಡ ಸೃಷ್ಠಿಸುವುದಕ್ಕಾಗಿ ಮಾಡುತ್ತಿದ್ದ ಬೊಗಳೆ ಪ್ರಯತ್ನಗಳು ತಪಶಸಣೆಯಿಂದ ಕಡಿಮೆಯಾಗುವ ಸಂಭವವಿದೆ. ಬಟ್ಟೆ ಇಸ್ತ್ರೀ ಮಾಡುವವರು, ಪತ್ರಿಕಾ ಕಚೇರಿಗಳಲ್ಲಿ ಕೆಲಸ ಮಾಡುವವರು, ಪೊಲೀಸ್ ಇಲಾಖೆಯಲ್ಲಿ ಇಲ್ಲದೇ ಇರುವವರು, ಯಾವುದೋ ಕಾಲಕ್ಕೆ ಮಿಲಿಟರಿಯಿಂದ ತಿರುಗಿ ಬಂದವರು ಸ್ವತಃ ತಮಗೆ ಮಜುಗುರವಾಗುವ ರೀತಿಯಲ್ಲಿ ನಾಮಫಲಕ ಅಳವಡಿಸಿ ಓಡಾಡುತ್ತಿರುವುದು ಪೊಲೀಸ್ ತಪಾಸಣೆಗೆ ತೊಂದರೆಯಾಗುತ್ತಿದೆ.

ಇದರ ಮಧ್ಯೆ ನಿಗದಿತ ವಾಹನಕ್ಕೆ ಇರಬೇಕಾದ ‘ಹಾರ್ನ್’ ಬದಲಾಗಿ ಪ್ರಾಣಿಗಳಂತೆ ಕೂಗುವ, ಲಾರಿ ಬಸ್ ಗಳ ‘ಹಾರ್ನ್’ ಬೈಕ್ ಗಳಿಗೆ ಬಳಸುವವರು, ಆರ್ ಟಿಓ ನಿಯಮ ಮೀರಿ fashion font ನಂಬರ ಪ್ಲೇಟ್ ಹೊಂದಿದ ವಾಹನಗಳನ್ನು ಪೊಲೀಸರು ತಪಾಸಿಸಲಿದ್ದಾರೆ.ತಮ್ಮ ಕಾರುಗಳಿಗೆ ಕೆಲವರು ಅನಧಿಕೃತ ಟಾಪ್ ಲೈಟ್ ( ಸೈರನ್) ಅಳವಡಿಸಿಕೊಂಡಿದ್ದರೆ, ಇನ್ನೂ ಕೆಲವರು ಟಾಪ ಲೈಟ್ ನಂತೆ ತತ್‍ಕ್ಷಣ ಕಾಣುವ ಕೆಂಪು ಗುಮ್ಮಟ ಮತ್ತು ಅಂಟೇನಾ ಅಳವಡಿಸಿಕೊಂಡ ಬಗ್ಗೆಯೂ ಇಲಾಖೆ ಗಮನ ಹರಿಸಿದೆ.

ಅನಧಿಕೃತ ಸೈರನ್ ಅಳವಡಿಸಿಕೊಂಡವರ ಕಾರಿನಿಂದ ಟಾಫ್ ಲೈಟ್ ಇಳಿಸುವಂತೆ ಆಗ್ರಹಿಸಿ ಈಗಾಗಲೇ ಮಾಹಿತಿ ಹಕ್ಕು ಕಾರ್ಯಕರ್ತ ಭೀಮಪ್ಪ ಗಡಾದ ಈಗಾಗಲೇ ಸ್ವತಃ ತಮ್ಮ ಕಾರಿಗೆ ಪ್ರತಿಭಟನಾರ್ಥ ಸೈರನ್ ಅಳವಡಿಸಿಕೊಂಡಿರುವುದು ಗಮನಿಸಬಹುದು. ಇಷ್ಟಾದರೂ ಪೊಲೀಸ್ ಆಡಳಿತ ಎಚ್ಚೆತ್ತುಕೊಂಡಿರಲಿಲ್ಲ. ಈ ಮಧ್ಯೆ ಅನಧಿಕೃತ ಬರಹಗಳ ಬಗ್ಗೆ ತಪಾಸಣೆ ನಡೆಯಲಿದೆ. ಪರಿಚಯ ಪತ್ರ(identity card) ಗಳ ತಪಾಸಣೆ ಜತೆಗೆ ದಂಡ ವಿಧಿಸಲಾಗುವುದು ಎಂದು ಹಿರಿಯ ಅಧಿಕಾರಿಗಳು ಸ್ಪಷ್ಠಪಡಿಸಿದ್ದಾರೆ. ಸೋಮವಾರದಿಂದ ನಗರದಲ್ಲಿ ಕಾರ್ಯಾಚರಣೆ ಚುರುಕುಗೊಳ್ಳಲಿದೆ.