SHARE

ಬೆಳಗಾವಿ: ಜಿಲ್ಲಾ ಪೊಲೀಸರು ಒಂದು ವಾರದ ಅವಧಿಯಲ್ಲಿ ಅಕ್ರಮ ಮರಳು, ಮೋಟಾರ ವಾಹನ ಕಾಯ್ದೆ ಉಲ್ಲಂಘನೆ, ಗಾಂಜಾ, ಜೂಜಾಟ, ಮಟಗಾ, ಅಬಕಾರಿ ಪ್ರಕರಣಗಖನ್ನು ಪತ್ತೆ ಹಚ್ಚಿದ್ದಾರೆ.ಅಕ್ರಮ ಮರಳು ಪ್ರಕರಣ ಒಟ್ಟು 26 ಕೇಸ್ 1.11 ಲಕ್ಷ ಮೌಲ್ಯ, 16 ಟ್ರ್ಯಾಕ್ಟರ್ ಮತ್ತು ಟ್ರೈಲರ್, 4 ಲಾರಿ, 2 ಟಿಪ್ಪರ್, 1 ಜೆಸಿಬಿ, 1 ಮೋಟಾರ ಸೈಕಲ್ ವಶಪಡಿಸಿ 41 ಆರೋಪಿತರನ್ನು ವಶಕ್ಕೆ ಪಡೆಯಲಾಗಿದೆ.

ಮೋಟಾರ ವಾಹನ ಕಾಯ್ದೆ ಪ್ರಕರಣಗಳು 2247 ದಾಖಲಿಸಿ 3.33ಲಕ್ಷ ದಂಡ ವಿಧಿಸಲಾಗಿದೆ. ಮಧ್ಯಪಾನ ವಾಹನ ಚಲಾವಣೆ 13 ಪ್ರಕರಣ ಸೇರಿ 12600 ದಂಡ ಆಕರಿಸಿ 13 ಜನರ ಮೇಲೆ ಕ್ರಮ ಕೈಗೊಳ್ಳಲಾಗಿದೆ. ಅಬಕಾರಿ ಪ್ರಕರಣಗಳಡಿ14 ಕೇಸ್ ದಾಖಲಿಸಿ 32464 ಮೊತ್ತದ ವಿವಿಧ ಮಧ್ಯ ಬಾಟಲಿಗಳು ಸೇರಿ 12 ಜನರನ್ನು ವಶಕ್ಕೆ ಪಡೆಯಲಾಗಿದೆ. ಜೂಜಾಟ ಪ್ರಕರಣ 3 ದಾಖಲಿಸಿ 2317 ವಶಕ್ಕೆ ಪಡೆಯಲಾಗಿದೆ.  ಮಟಕಾ ಪ್ರಕರಣ 14, ಗಾಂಜಾ ಪ್ರಕರಣ 1 ದಾಖಲಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಬಿ. ಆರ್. ರವಿಕಾಂತೇಗೌಡ ತಿಳಿಸಿದ್ದಾರೆ.