SHARE
ಬೆಳಗಾವಿ: ಸಂವಿಧಾನಶಿಲ್ಪಿ ಡಾ. ಬಿ. ಆರ್. ಅಂಬೇಡ್ಕರ್ 126 ನೇ ಜನ್ಮಶತಮಾನೋತ್ಸವ ಜಿಲ್ಲಾಡಳಿತದ ವತಿಯಿಂದ ಶುಕ್ರವಾರ ಬೆಳಿಗ್ಗೆ ನಗರದ ಅಂಬೇಡ್ಕರ್ ಉದ್ಯಾನದಲ್ಲಿ ನಡೆಯಿತು. ಅಂಬೇಡ್ಕರ್ ಮೂರ್ತಿಗೆ ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ, ಜಿಲ್ಲಾಧಿಕಾರಿ ಎನ್. ಜಯರಾಮ ಮಾಲಾರ್ಪಣೆ ಮಾಡಿದರು.
ನಂತರ ಡಾ. ಅಂಬೇಡ್ಕರ್ ಜ್ಯೋತಿ ಕಿಲ್ಲಾಕೆರೆ ಅಶೋಕ ವೃತ್ತದಿಂದ ಡಾ. ಅಂಬೇಡ್ಕರ್ ಉದ್ಯಾನಕ್ಕೆ ಆಗಮಿಸುತ್ತಿದ್ದಂತೆ ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಹಾಗೂ ಜಿಲ್ಲಾಧಿಕಾರಿ ಎನ್. ಜಯರಾಮ ಜ್ಯೋತಿ ಆಹ್ವಾನಿಸಿಕೊಂಡರು. ಅಂಬೇಡ್ಕರ್ ಉದ್ಯಾನದಲ್ಲಿ ಜನಸಮೂಹ ಕಿಕ್ಕಿರಿದು ಸೇರಿ ಜನ್ಮಶತಮಾನೋತ್ಸವ ಆಚರಿಸಿದರು.
ಸಚಿವ ರಮೇಶ ಜಾರಕಿಹೊಳಿ ಮಾತನಾಡಿ ದಲಿತರು ಮತ್ತು ಹಿಂದುಳಿದ ವರ್ಗಕ್ಕೆ ಅಂಬೇಡ್ಕರ್ ಸೇವೆ ಅನನ್ಯ ಎಂದರು. ನಗರದ ಕಿಲ್ಲಾ ಕೆರೆಯಲ್ಲಿ ಸುಮಾರು 1 ಕೋಟಿ ವೆಚ್ಚದಲ್ಲಿ ಡಾ. ಅಂಬೇಡ್ಕರ್ ಮೂರ್ತಿ ಪ್ರತಿಷ್ಠಾಪಿಸಿ ಮೆರಗು ಹೆಚ್ಚಿಸಲಾಗುವುದು ಎಂದರು. 
ಸಂಸದ ಸುರೇಶ ಅಂಗಡಿ, ಶಾಸಕರಾದ ಫಿರೋಜ್ ಸೇಠ್, ಸಂಜಯ ಪಾಟೀಲ, ಮೇಯರ್ ಸಂಜೊತಾ ಬಾಂದೇಕರ, ಜಿಪಂ. ಅಧ್ಯಕ್ಷೆ ಆಶಾ ಐಹೊಳೆ, ಡಿಸಿ ಎನ್. ಜಯರಾಮ, ಐಜಿಪಿ ಡಾ. ಕೆ. ರಾಮಚಂದ್ರರಾವ್, ಕಮಿಷ್ನರ್ ಟಿ. ಜಿ. ಕೃಷ್ಣಭಟ್, ಸಿಇಓ ಡಾ. ರಾಮಚಂದ್ರನ್, ಎಸ್ ಪಿ ಡಾ. ರವಿಕಾಂತೇಗೌಡ, ಡಿಸಿಪಿ ಜಿ. ರಾಧಿಕಾ, ಡಾ. ಸುರೇಶ ಇಟ್ನಾಳ,  ಡಿಸಿಪಿ ಅಮರನಾಥರೆಡ್ಡಿ, ಕಮಿಷ್ನರ್ ಶಶಿಧರ ಕುರೇರ, ಎಸ್ಪಿ ಎಸ್. ಟಿ. ಪಡಗನ್ನವರ, ಎಸಿ ರಾಜಶ್ರೀ ಜೈನಶಪುರೆ ತಹಶೀಲ್ದಾರ, ಗಿರೀಶ ಸ್ವಾದಿ, ಜಂಟಿ ನಿರ್ದೇಶಕಿ ಉಮಾ ಸಾಲಿಗೌಡರ, ಸಹಾಯಕ ನಿರ್ದೇಶಕಿ ವಿದ್ಯಾವತಿ ಭಜಂತ್ರಿ, ದಲಿತ ಮುಖಂಡರಾದ ಶಂಕರ ಮುನವಳ್ಳಿ, ಮಲ್ಲೇಶ ಚೌಗುಲೆ, ಮಹಾದೇವ ತಳವಾರ, ದುರ್ಗೇಶ ಮೇತ್ರಿ ಇನ್ನಿತರರು ಭಾಗವಹಿಸಿದ್ದರು.ರಕ್ತದಾನ ಶಿಬಿರ: ಅಂಬೇಡ್ಕರ್ ಉದ್ಯಾನದಲ್ಲಿ ರಕ್ತದಾನ ಶಿಬಿರ ನಡೆಯಿತು. ಸ್ವಯಂ ಇಚ್ಛಿತ ಸಾರ್ವಜನಿಕರು ರಕ್ತದಾನ ಮಾಡಿದರು.