SHARE

ಬೆಳಗಾವಿ: ಇತ್ತೀಚೆಗೆ ರಾಜ್ಯ ಪೊಲೀಸ್ ಇಲಾಖೆಯ ಮುಖ್ಯಸ್ಥರಾದ ಶ್ರೀ ಆರ್ ಕೆ ದತ್ತಾ ಐಪಿಎಸ್ ಮಾನ್ಯ ಡಿಜಿ ಮತ್ತು ಐಜಿಪಿ ಬೆಂಗಳೂರು ರವರು ಜಾರಿಗೆ ತಂದ ಹೊಸ್ ಬೀಟ್ ಪದ್ದತಿಯನ್ನು ಯಶಸ್ವಿಯಾಗಿ ಹಾಗೂ ಸಾರ್ವಜನಿಕ ವಲಯದಲ್ಲಿ ಜನಸ್ನೇಹಿ ಪೊಲೀಸ್ ಬಾಂಧವ್ಯ ಮತ್ತು ಸಾರ್ವಜನಿಕರ ಸಹಕಾರದಲ್ಲಿ ಸಮಾಜದ ಶಾಂತಿ ಸುವ್ಯವಸ್ಥೆ ಕಾಪಾಡಿಕೊಂಡು ಬರಲು ಮತ್ತು ನಗರದ ಅತೀ ಚಿಕ್ಕ ಘಟಕಗಳಾದ ಓಣಿ/ಗಲ್ಲಿ/ಮೊಹಲ್ಲಾ ಹಾಗೂ ಚಿಕ್ಕ ಏರಿಯಾಗಳಲ್ಲಿ ನಿಗಧಿತ ಪ್ರದೇಶಕ್ಕೊಂದರಂತೆ ಒಂದು ಬೀಟ್ ಅಂತಾ ಪರಿಗಣಿಸಿ ಅಲ್ಲಿ ಒಂದು ಮಂಡಳಿಯನ್ನು ಸ್ಥಾಪಿಸಿ ಅದಕ್ಕೆ ಒಬ್ಬ ಪೊಲೀಸ್ ಅಧಿಕಾರಿ ಹಾಗೂ ಸದರಿ ಗಲ್ಲಿಯ ಸರ್ಕಾರೇತರ-ಸಂಘ ಸಂಸ್ಥೆ, ಹಿರಿಯ ನಾಗರಿಕರು, ಮಹಿಳೆಯರು, ವಿದ್ಯಾರ್ಥಿಗಳು ಹಾಗೂ ಕೆಲವು ವಿಶೇಷ ಕ್ಷೇತ್ರಗಳಲ್ಲಿ ನೈಪುಣ್ಯತೆ ಹೊಂದಿದ ಸಾರ್ವಜನಿಕರನ್ನು ಸದರಿ ಬೀಟ್ ಸದಸ್ಯರನ್ನಾಗಿ ಮಾಡಿಕೊಂಡು ಅವರ ಸಹಕಾರದಿಂದ ಅಲ್ಲಿ ಅಪರಾಧ ತಡೆ, ಕಾನೂನು ಸುವ್ಯವಸ್ಥೆ, ಮಹಿಳೆಯರ ಮತ್ತು ಮಕ್ಕಳ ರಕ್ಷಣೆ, ಅವಶ್ಯಕ ಕಾರ್ಯಗಳ ಜಾರಿ, ಹಾಗೂ ಸಂಪೂರ್ಣ ಅಭಿವೃದ್ದಿಯನ್ನು ಕೈಗೊಂಡು ನಾಗರೀಕ ಸುರಕ್ಷಾ ದೃಷ್ಟಿಯಿಂದ ಬೆಳಗಾವಿ ನಗರ ಪೊಲೀಸ್ ಆಯುಕ್ತರಾದ ಶ್ರೀ ಟಿ ಜಿ ಕೃಷ್ಣಭಟ್, ಐಪಿಎಸ್ ಡಿಸಿಪಿ (ಕಾ&ಸು) ರವರಾದ ಶ್ರೀಮತಿ ಜಿ. ರಾಧಿಕಾ.ಐಪಿಎಸ್ ಹಾಗೂ ಡಿಸಿಪಿ (ಅಪರಾಧ) ರವರಾದ ಶ್ರೀ ಅಮರನಾಥ ರೆಡ್ಡಿ ರವರು ಸಾರ್ವಜನಿಕರಿಗೆ ಹೊಸ ಬೀಟ್ ಸದಸ್ಯರಾಗಲು ಕರೆ ನೀಡಿದ್ದಾರೆ.

ಸದಸ್ಯತ್ವಕ್ಕೆ ತಮ್ಮ ವಿವರ ಹಾಗೂ ಒಂದು ಭಾವಚಿತ್ರದೊಂದಿಗೆ ನಗರದ ಸಂಬಂಧಪಟ್ಟ ಪೊಲೀಸ್ ಠಾಣೆಯ ಪೊಲೀಸ್ ಅಧಿಕಾರಿಗಳನ್ನು ಅಥವಾ ನಗರ ಪೊಲೀಸ್ ಕಂಟ್ರೋಲ್ ರೂಂ (0831-2405233 & 100) ಗೆ ಸಂಪರ್ಕಿಸಿ ಸದಸ್ಯತ್ವವನ್ನು ಹೊಂದಲು ಸಂಪರ್ಕಿಸ್ಬಹುದು.