SHARE

ಬೆಳಗಾವಿ: ಸಮೀಪದ ಕಾಕತಿ ಗ್ರಾಮದ ಮುಸ್ಲಿಂ ಗಲ್ಲಿಯಲ್ಲಿ  ಕಲ್ಲು ಕೈಗಾರಿಕೆ ನಡೆಸಲಾಗುತ್ತಿದ್ದು, ನಾಗರಿಕರ ತೊಂದರೆ ಪರಿಶೀಲಿಸಿ ಯುನಿಟ್ ಬಂದ್ ಮಾಡಿಸುವಂತೆ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಕೆಯಾಗಿದೆ.ರಾಜನೂರ ದೋನಕರ ಹಾಗೂ ಖಾಜಿ ಎಂಬುವವರು ಲೈಮ್(lime) ಪೆಸ್ಟ್ ಮತ್ತು ಕಲ್ಲು ಗಣಿಗಾರಿಕೆ ಯುನಿಟ್ ನಡೆಸುತ್ತಿದ್ದು ಇದರಿಂದ ಧೂಳು, ಹೊಗೆ, ಶಬ್ದ ಮಾಲಿನ್ಯವಾಗಿ ನಾಗರಿಕರಿಗೆ ತೊಂದರೆಯಾಗಿದೆ.

ಕೈಗಾರಿಕಾ ಉಪಯೋಗಿ ಕೊಳೆ ನೀರು ಬಹಿರಂಗವಾಗಿ ಬಿಡಲಾಗುತ್ತಿದ್ದು ಕೂಡಲೆ ಬಂದ್ ಮಾಡಿಸಬೇಕೆಂದು ಒತ್ತಾಯಿಸಿದರು. ಇರ್ಫಾನ ಪಠಾಣ, ಖುತ್ಬೂದ್ದಿನ್ ಪಟಗಾಂವಕರ, ಬೇಬಿಜರಾ ಖಾಜಿ, ಆಸ್ಮಾ ಪಟಗಾಂವಕರ, ಶಾಹೀದ್ ಹಲಗೇಕರ ಸೇರಿ ಗಲ್ಲಿಯ ಜನತೆ ಭಾಗವಹಿಸಿದ್ದರು.