SHARE

ಬೆಳಗಾವಿ: ನ್ಯಾಯಾಂಗ, ಜಿಲ್ಲಾಡಳಿತ, ಪೊಲೀಸ್, ಬಾರ್ ಅಸೋಸಿಯೇಶನ್ ಮತ್ತಿತರ ಸಂದ್ಥೆಗಳ ಸಹಯೋಗದಲ್ಲಿ ಜಿಲ್ಲಾ ಲೀಗಲ್ ಸರ್ವೀಸ್ ಸೆಲ್ ನಿಂದ ಏ. 23 ರಂದು ಪೂರ್ಣ ಜಿಲ್ಲಾಡಳಿತದಿಂದ ಜನರ ಎಲ್ಲ ಬಗೆಯ ಸಮಸ್ಯೆಗಳ ಇತ್ಯರ್ಥ ನಡೆಸಲಾಗುವುದು ಎಂದರು.ಹಣ್ಣಿಕೇರಿ, ತಿಗಡಿ, ಸಂಪಗಾಂವಿ ಗ್ರಾಮಗಳ ಜನರ ಎಲ್ಲ ಬಗೆಯ ಸಮಸ್ಯೆಗಳಾದ ನಾಗರಿಕ ಸೌಲಭ್ಯಗಳ ಕೊರತೆ, ಪಿಂಚಣಿ ಸಮಸ್ಯೆ, ರೇಷನ್ ಕಾರ್ಡ್ ಇಲ್ಲ, ಲೈಸನ್ಸ್ ಇಲ್ಲ ಇನ್ನಿತರ ಎಲ್ಲ ಸಮಸ್ಯೆಗಳ ಬಗ್ಗೆ ಜಿಲ್ಲಾಡಳಿತ ಪರಿಹಾರ ಕಂಡುಕೊಳ್ಳಲಿದೆ. ಸುಮಾರು 42 ವೈದ್ಯರು ಎಲ್ಲ ಆರೋಗ್ಯ ಸಮಸ್ಯೆಗಳ ಬಗ್ಗೆ ಚಿಕಿತ್ಸೆ ಉಚಿತವಾಗಿ ಕೊಡಲಿದ್ದಾರೆ.

ಸಂಪಗಾಂವ ಗ್ರಾಮದ ಆರ್ ಇ ಎಸ್ ಹೈಸ್ಕೂಲ್ ನಲ್ಲಿ ಮೂರು ಗ್ರಾಮಗಳ ಸಮಸ್ಯೆ ಪರಿಹಾರಕ್ಕೆ ಪ್ರಯತ್ನಿಸಲಾಗುವುದು. ಹೈಕೋರ್ಟ್ ನ್ಯಾಯಮೂರ್ತಿ ಎಲ್. ನಾರಾಯಣಸ್ವಾಮಿ, ಜಿಲ್ಲಾ ಪ್ರಧಾನ ನ್ಯಾಯಾಧೀಶ ಆರ್. ಜೆ. ಸತೀಶಸಿಂಗ್ ಅಧ್ಯಕ್ಷತೆ ವಹಿಸುವರು, ಜಿಲ್ಲಾಧಿಕಾರಿ ಎನ್. ಜಯರಾಮ ಮುಖ್ಯ ಅತಿಥಿಯಾಗಿ ಆಗಮಿಸುವರು. ಜಿಪಂ. ಸಿಇಓ ಆರ್. ರಾಮಚಂದ್ರನ್, ಎಸ್ಪಿ ರವಿಕಾಂತೇಗೌಡ, ಬಾರ್ ಅಸೊಸಿಯೇಶನ್ ಅಧ್ಯಕ್ಷ ಎಸ್. ಎಸ್. ಕಿವಡಸಣ್ಣವರ, ಎಸ್. ವೈ. ಸೋಮನ್ನವರ, ಡಾ. ಎಸ್. ಟಿ. ಕಳಸದ, ಡಾ. ಮಹಾಂತೇಷ ಚರಂತಿಮಠ, ಡಾ. ಎಚ್. ವಿ. ಸಂಧ್ಯಾ, ಜಯಸಿಂಹ ಭಾಗವಹಿಸಲಿದ್ದಾರೆ.