SHARE

ಬೆಳಗಾವಿ: ಎರಡನೇ ಹಂತದ ಪಲ್ಸ್ ಪೋಲಿಯೊ ಲಸಿಕೆ ಹಾಗೂ ಇಂದ್ರಧನುಷ್ ಚುಚುಮದ್ದು ಪರಿಣಾಮಕಾರಿ ಆಗಬೇಕು ಎಂದು ಜಿಲ್ಲಾಧಿಕಾರಿ ಎನ್.ಜಯರಾಮ ಅಧಿಕಾರಿಗಳಿಗೆ ಸೂಚಿಸಿದರು.ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಶನಿವಾರ ಜಿಲ್ಲಾಧಿಕಾರಿಗಳ ಇಂಧ್ರಧನುಷ ಚುಚ್ಚುಮದ್ದು ನಾಲ್ಕನೇ ಫೇಸ್ ಮೇ, ಜೂನ್, ಜುಲೈ, ಅಗಷ್ಟನಲ್ಲಿ ಪ್ರತಿ ತಿಂಗಳ ಏಳು ದಿನ ಹಾಗೂ ಏಪ್ರಿಲ್‌ ೩೦ ನಡೆಯುವ ಎರಡನೇ ಹಂತದ ಪಲ್ಸ್ ಪೋಲಿಯೊ ಲಸಿಕೆ ಕುರಿತು ಸಭೆ ನಡೆಯಿತು.

ಜಿಲ್ಲೆಯಲ್ಲಿನ ೦-೨ ವರ್ಷದೊಳಗಿನ ಹಾಗೂ ಐದಾರು ವರ್ಷದ ಅಪೂರ್ಣಗೊಂಡ ಮಕ್ಕಳಿಗೆ ಮತ್ತು ಗರ್ಭಿಣಿಯರಿಗೆ ಇಂದ್ರಧನುಷ ಚುಚುಮದ್ದು ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು ಎಂದರು.ಸುರಕ್ಷಾ ಟ್ರಸ್ರ್ಟ ನ ಡಾ. ವಿ.ಡಿ.ಡಾಂಗೆ, ಡಿಎಚ್ ಓ ಡಾ. ಅಪ್ಪಾಸಾಹೇಬ ನರಟ್ಟಿ, ಎಡಿಎಚ್ ಓ ಡಾ. ಎಸ್.ಬಿ.ಮುನ್ಯಾಳ ಸೇರಿದಂತೆ ಶಿಕ್ಷಣ, ಆರೋಗ್ಯ, ಮಹಿಳಾ ಮತ್ತು ಮಕ್ಕಳ ಕಲ್ಯಾಣ, ಸಮಾಜ ಕಲ್ಯಾಣ, ಪಾಲಿಕೆ, ಕಾರ್ಮಿಕ, ವಾರ್ತಾ, ಜಿಲ್ಲಾ ಪಂಚಾಯಿತಿ ಇಲಾಖೆಯ ಅಧಿಕಾರಿಗಳು ಸಭೆಯಲ್ಲಿ ಭಾಗಿಯಾಗಿದ್ದರು.