SHARE

ಬೆಳಗಾವಿ:ತೆರೆದ ಕೊಳವೆ ಬಾವಿಗೆ ಮತ್ತೊಂದು ಪುಟ್ಟ ಜೀವ ಬಿದ್ದು ಪದ್ದಾಡುವ ಮರುಕ ಸಂದರ್ಭ ಬಂದೊದಗಿದೆ.ಅಥಣಿ ಸಮೀಪದ ಝಂಜರವಾಡ ಗ್ರಾಮದ ಹೊರವೊಲಯದ ತೆರೆದ ಬೋರವೆಲ್ ಗೆ 50 ಅಡಿ ಆಳದಲ್ಲಿ ಸುಮಾರು 5 ವರ್ಷದ ಬಾಲಕಿ ಬಿದ್ದಿದ್ದಾಳೆ.

ಇಂದು ಸಂಜೆ ಬಿದ್ದು ವ್ಯಸನ ಪಡುತ್ತಿರುವ ಬಾಲಕಿಯನ್ನು ಕಾವೇರಿ ಅಜೀತ ಮಾದರ(6) ಎಂದು ಗುರುತಿಲಾಸಗಿದೆ. ಶಂಕರ ಹಿಪ್ಪರಗಿ ಎಂಬುವವರ ಮಾಲಿಕತ್ವದ ಬಾವಿಗೆ ಬಾಲಕಿ ಬಿದ್ದಿದ್ದು, ರಕ್ಷಣಾ ಕಾರ್ಯ ನಡೆದಿದೆ. ಅಗ್ನಿಶಾಮಕ ಸಿಬ್ಬಂದಿಗಳು ಸ್ಥಳದಲ್ಲಿ ಠಿಕಾಣೆ ಹೂಡಿದ್ದಾರೆ. ಕತ್ತಲಾವರಿಸಿದ್ದರಿಂದ ಕಾರ್ಯಾಚರಣೆಗೆ ವಿಳಂಬವಾಗುತ್ತಿದೆ. ಐಗಳಿ ಪೋಲಿಸ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಜಿಲ್ಲಾಧಿಕಾರಿ ಹಾಗೂ ಎಸ್ಪಿ ರವಿಕಾಂತೇಗೌಡ ಸ್ಥಳದತ್ತ ಧಾವಿಸುತ್ತಿದ್ದಾರೆ.

ಹೆಚ್ಚುವರಿ ಜಿಲ್ಲಾಧಿಕಾರಿ ಡಾ. ಸುರೇಶ ಇಟ್ನಾಳ ಈಗಾಗಲೇ ಸ್ಥಳ ಸಮೀಪಿಸಿದ್ದಾರೆ.ಅಥಣಿ, ವಿಜಯಪುರ ಹಾಗೂ ಬೆಳಗಾವಿಯಿಂದ ಅಗ್ನಿಶಾಮಕ ವಾಹನಗಳನ್ನು ತರಿಸಿಕೊಳ್ಳಲಾಗಿದೆ ಎಂದು ಅಗ್ನಿಶಾಮಕ ಜಿಲ್ಲಾಧಿಕಾರಿ ಶಿವಕುಮಾರ ತಿಳಿಸಿದ್ದಾರೆ. 20 ಅಡಿ ಆಳಕ್ಕೆ ಮಣ್ಣು ಕುಸಿದಿದ್ದು ತೀವೃ ಪ್ರಯತ್ನ ಮಾಡಲಾಗುವುದು ಎಂದು ಸಿಬ್ಬಂಧಿ ತಿಳಿಸಿದ್ದಾರೆ. ಪಾಲಕರ ಗ್ರಾಮಸ್ಥರ ರೋಧನ ಮುಗಿಲು ಮುಟ್ಟಿದೆ.

ಎನ್ ಡಿಆರ್ ಎಫ್ ಕೋಲಾರ, ಹಟ್ಟಿ ಚಿನ್ನದ ಗಣಿ ಹಾಗೂ ಹೈದರಾಬಾದನಿಂದ ತಂತ್ರಜ್ಞರ ತಂಡ ಆಗಮಿಸುತ್ತಿದೆ ಎಂದು ಎಡಿಸಿ ಡಾ. ಸುರೇಶ ಇಟ್ನಾಳ ತಿಳಿಸಿದ್ದು, ಬಾಲಕಿ ಉಖಿಸಲು ಎಲ್ಲ ಪ್ರಯತ್ನ ಮಾಡಲಾಗುವುದು ಎಂದು ಅವರು ತಿಳಿಸಿದ್ದಾರೆ.