SHARE

ಬೆಳಗಾವಿ:ಹಿಂದೂ ಸಾಮ್ರಾಜ್ಯ ಸ್ಥಾಪಕ, ಶೂರ ಶಿವಾಜಿ ಮಹಾರಾಜರ ಭವ್ಯ ಜಯಂತಿ ಉತ್ಸವಕ್ಕೆ ಜಿಲ್ಲಾಡಳಿತ ಇಂದು ಸಂಜೆ ನಗರದ ನರಗುಂದಕರ ಭಾವೆ ಚೌಕ್ ನಲ್ಲಿ ಚಾಲನೆ ನೀಡಿತು.ಮೇಯರ್ ಸಂಜೋತಾ ಬಾಂದೇಕರ ಮೆರವಣಿಗೆಗೆ ಚಾಲನೆ ನೀಡಿದರು. ಶಿವಾಜಿ ಮಹಾರಾಜರ ಜೀವನ ಚರಿತ್ರೆ ಸಾರುವ, ರಾಜಮಹಾರಾಜರ ಕಾಲದ ಮುಖ್ಯ ಘಟನಾವಳಿಗಳನ್ನು ಸಾರುವ ಸುಮಾರು 70 ರೂಪಕ (Tablo) ಗಳು ಗಲ್ಲುಗಳುದ್ದಕ್ಕೂ ನೆರೆದಿದ್ದ ಜನತೆಯನ್ನು ಆಕರ್ಷಿಸಿದವು.

ಶಾಸಕ ಸಂಭಾಜಿ ಪಾಟೀಲ, ಉಪಮೇಯರ್ ನಾಗೇಶ ಮಂಡೋಳ್ಕರ, ಪೊಲೀಸ್ ಆಯುಕ್ತ ಟಿ. ಜಿ. ಕೃಷ್ಣಭಟ್, ಪಾಲಿಕೆ ಆಯುಕ್ತ ಶಶಿಧರ ಕುರೇರ, ದೀಪಕ ದಳವಿ, ವಿಕಾಸ ಕಲಘಟಗಿ, ಅನಿಲ ಬೆನಕೆ, ಕಿರಣ ಜಾಧವ ಸೇರಿದಂತೆ ಜನಪ್ರತಿನಿಧಿಗಳು ಹಿರಿಯ ಅಧಿಕಾರಿಗಳು ಹಾಗೂ ನಾಗರಿಕರು ಭಾಗವಹಿಸಿದ್ದರು.ಮಕ್ಕಳ ಲೇಜಿಮ್, ಭಜನಾ ತಂಡ, ಸಾಂಪ್ರದಾಯಿಕ ವಾದ್ಯಗೋಷ್ಠಿ, ಜಾಂಛ ಪದಕ ಸೇರಿದಂತೆ ವಿವಿಧ ಸಾಂಸ್ಕೃತಿಕ ನೃತ್ಯಗಳು ಪ್ರದರ್ಶನಗೊಂಡವು. ಪೊಲೀಸರ ಕಟ್ಟುನಿಟ್ಟಿನ ಸೂಚಬೆಯ ನಡುವೆ ಮೆರವಣಿಗೆ ಇಡೀ ರಾತ್ರಿ ನಡೆಯಲಿದೆ.Photo C’tsy:commissioner of police belagavi city
ಕಂಡಲ್ಲೆಲ್ಲ ಪೊಲೀಸರು:ಶಿವಾಜಿ ಜಯಂತಿ ಮೆರವಣಿಗೆ ಹಿನ್ನೆಲೆಯಲ್ಲಿ ನಗರದ ತುಂಬ ಕಮಿಷ್ನರ್ ಕೃಷ್ಣಭಟ್ ಮತ್ತು ಮೂವರು ಡಿಸಿಪಿಗಳ ನೇತೃತ್ವದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ವಹಿಸಲಾಗಿತ್ತು. ನಗರದ ತುಂಬ ಕಂಡಲ್ಲೆಲ್ಲ ಪೊಲೀಸರೆ ಕಂಡುಬಂದರು.