SHARE

ಬೆಳಗಾವಿ: ಸವದತ್ತಿ ಸಮೀಪದ ಹಂಚಿನಾಳ ಗ್ರಾಮದ ಅಗ್ನಿ ಅವಘಡದಲ್ಲಿ ಬೆಂಕಿಗಾಹುತಿಯಾದ 72 ಮನೆಗಳ ಮಾಲೀಕರಿಗೆ ವಸತಿ ಆವಾಸ ಯೋಜನೆಯಡಿ ಮನೆ ನೀಡಲಾಗುವುದು ಎಂದು ಸಚಿವ ರಮೇಶ ಜಾರಕಿಹೊಳಿ ಅಭಯ ನೀಡಿದ್ದಾರೆ. ಗ್ರಾಮದಲ್ಲಿ ಪರಿಸ್ಥಿತಿ ಅವಲೋಕಿಸಿದ ಸಚಿವ ರಮೇಶ ಜಾರಕಿಹೊಳಿ ಹಾನಿಯಾದ ಕುಟುಂಬಗಳಿಗೆ ಬಸವ ಯೋಜನೆಯಡಿಯಲ್ಲಿ ಕನಿಷ್ಠ 100 ಮನೆಗಳನ್ನು‌ ನಿರ್ಮಾಣ ಮಾಡಿಕೊಡಲಾಗುವುದು ಎಂದಿದ್ದಾರೆ.

ಶನಿವಾರ ಸಂಜೆ ಹಂಚಿನಾಳ ಗ್ರಾಮದ ಹುಲ್ಲಿನ ಬಣವೆಗೆ ಬೆಂಕಿ ಬಿದ್ದ ಪರಿಣಾಮ 72 ಮನೆಗಳು, ಮೂರು  ಜಾನುವಾರು, 76 ಬಣವೆಗಳು ಬೆಂಕಿಯಲ್ಲಿ ಬೆಂದು ಹೋಗಿವೆ. ರಾತ್ರಿಯಿಡಿ ಶ್ರಮಿಸಿದ ಅಗ್ನಿ ಶಾಮಕ‌ ಸಿಬ್ಬಂಧಿ ರವಿವಾರ ಮಧ್ಯಾಹ್ನ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬೆಂಕಿಗೆ ಆಹುತಿಯಾದ ಮನೆಯ ಕುಟುಂಬಸ್ಥರಿಗೆ ಸರಕಾರಿ ಶಾಲೆಗಳಲ್ಲಿ ತಾತ್ಕಾಲಿಕ ವಸತಿ ಯೋಜನೆ ಅಧಿಕಾರಿಗಳು ಮಾಡಿದರು. ಜಿಲ್ಲಾಡಳಿತ ಗಂಜಿ ಕೇಂದ್ರದ ಮೂಲಕ ಊಟ,ತಿಂಡಿ ನೀಡಿದೆ.