SHARE

ಬೆಳಗಾವಿ:ಹುದ್ದೆ ತುಂಬುವ ಅಧಿಕಾರವಿಲ್ಲದಿದ್ದರೂ 23 ಜನರಿಗೆ ಹುದ್ದೆ ನೀಡಿದ ನಿವೃತ್ತ ಡಿಡಿಪಿಐ ಎಸ್. ವೈ. ಹಳಿಂಗಳಿ ಅವರ ಪಿಂಚಣಿ ಸೌಲಭ್ಯಗಳನ್ನು ತಡೆಹಿಡಿಯಬೇಕೆಂದು ಜಿಪಂ. ಸದಸ್ಯ ಶಂಕರ ಮಾಡಲಗಿ ಒತ್ತಾಯಿಸಿದ್ದಾರೆ.ಇಂದಿನ ಜಿಪಂ. ಸಾಮಾನ್ಯ  ಸಭೆಯಲ್ಲಿ ಹಳಿಂಗಳಿ ವ್ಯಾಪಕ ಭ್ರಷ್ಟಾಚಾರ, ಸ್ವಜನಪಕ್ಷಪಾತ ಮಾಡಿರುವ ಡಿಡಿಪಿಐ ಅವರು ತಮಗೆ ಅಧಿಕಾರವಿಲ್ಲದಿದ್ದರೂ ಶಿಕ್ಷಕರನ್ನು ಶಾಲೆಗಳಿಗೆ ಕೌನ್ಸಿಲ್ ಹೊರತಾಗಿ ನಿಯೋಜನೆ ಮಾಡಿದ್ದಾರೆ.

ಆರೋಪಿತ ಶಿಕ್ಷಕರನ್ನು ಬೆಳಿಗ್ಗೆ 11:30 suspend , ಮಧ್ಯಾಹ್ನ 3 ಕ್ಕೆ ವಿಚಾರಣೆ ಸಂಜೆ 6 ಕ್ಕೆ ಮತ್ತೆ ಅದೇ ಹುದ್ದೆಗೆ ಮರು ಹಾಜರಿಗೆ ಆದೇಶ ನೀಡಿರುವ ಡಿಡಿಪಿಐ ನಡೆ ವಿಸ್ಮಯ ಮೂಡಿಸಿದೆ. ನಿವೃತ್ತ ಡಿಡಿಪಿಐ ಮೇಲೆ ತತ್ಕ್ಷಣ ಕ್ರಮಕ್ಕೆ ಸರಕಾರಕ್ಕೆ ಶಿಫಾರಸ್ಸು ಮಾಡಬೇಕೆಂದರು.ಪ್ರತಿಕ್ರಿಯಿಸಿದ ಸಿಇಓ ಡಾ. ರಾಮಚಂದ್ರನ್ ನಿವೃತ್ತ ಡಿಡಿಪಿಐ, ಮೇಲಿನ ಎಲ್ಲ ಆರೋಪಗಳ ಸಮಗ್ರ ತನಿಖೆ ನಡೆಸಿ ಸರಕಾರಕ್ಕೆ ಅವರ ಪಿಂಚಣಿ ತಡೆಹಿಡಿಯುವ ಬಗ್ಗೆ ಪತ್ರ ಬರೆಯಲಾಗುವುದು. ಹಳಿಂಗಳಿ ಮೇಲೆ ಕ್ರಮ ಕೈಗೊಳ್ಳಲಾಗುವುದು ಎಂದರು.