SHARE

ಬೆಳಗಾವಿ/ ದುಬೈ: ದುಬೈನಲ್ಲಿರುವ ಬಸವ ಸಮಿತಿಯಿಂದ ಬೆಳಗಾವಿಯವರಾದ ನಿವೃತ್ತ ಐಎಎಸ್ ಅಧಿಕಾರಿ ಡಾ. ಎಸ್.ಎಂ. ಜಾಮದಾರ ಅವರಿಗೆ ಬಸವ ಭೂಷಣ ಪ್ರಶಸ್ತಿ ನೀಡಿ ಗೌರವಿಸಲಾಯಿತು.ದುಬೈನಲ್ಲಿರುವ ಜೆಎಸ್ಎಸ್ ಪ್ರೈವೇಟ್ ಸ್ಕೂಲ್ ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಮುಂಡರಗಿ ಅನ್ನದಾನೇಶ್ವರ ಸ್ವಾಮೀಜಿ ಪ್ರಶಸ್ತಿ ಪ್ರದಾನ ಮಾಡಿದರು.ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಎಸ್. ಎಂ. ಜಾಮದಾರ ಅವರು ಬಸವ ವಚನಗಳು ಮತ್ತು ಜೀನ ಚರಿತ್ರೆ ವಿಶ್ವದಲ್ಲಿ ಇಂದಿಗೂ ಪ್ರಚಲಿತವಾಗಿವೆ. ಕೂಡಲ ಸಂಗಮ ಅಭಿವೃದ್ದಿ ಜವಾಬ್ದಾರಿ ವಹಿಸಿಕೊಂಡು ಅದನ್ನು ಅಂತಾರಾಷ್ಟ್ರೀಯ ಮಟ್ಟಕ್ಕೆ ಏರಿಸಲು ಸಾಕಷ್ಟು ಶ್ರಮ ಪಟ್ಟಿದ್ದು ಸಾರ್ಥಕವಾಗಿದೆ ಎಂದು ಹೇಳಿದರು. ಕೂಡಲ ಸಂಗಮದ ಅಭಿವೃದ್ದಿ ಕುರಿತು ತಮ್ಮ ಚಿಂತನೆ ಸಾಕಾರ ಆಗಿರುವುದಕ್ಕೆ ಸಂತಸವಾಗಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಹರಪನಹಳ್ಳಿ ಶಾಸಕ ಎಂ.ಪಿ. ರವೀಂದ್ರ, ದುಬೈ ಎನ್ಆರ್ಐ ಫೋರಂನ ಅಧ್ಯಕ್ಷ ಪ್ರವೀಣ್ ಶೆಟ್ಟಿ, ಬಸವ ಸಮಿತಿ ಮುಖ್ಯಸ್ಥ ಚಂದ್ರಶೇಖರ ಲಿಂಗದಳ್ಳಿ ಹಾಜರಿದ್ದರು.ನಂತರ ಧಾರವಾಡದ ಜಾನಪದ ಸಂಶೋಧನಾ ಕೇಂದ್ರದ ಬಸಲಿಂಗಯ್ಯ ಹಿರೇಮಠ ಅವರ ತಂಡದಿಂದ ಶ್ರೀಕೃಷ್ಣ ಪಾರಿಜಾತ ಜಾನಪದ ಸಣ್ಣಾಟ ಪ್ರದರ್ಶನ ಮಾಡಲಾಯಿತು. ಇದೇ ಸಂದರ್ಭದಲ್ಲಿ ದುಬೈ ಕನ್ನಡಿಗರ ಮಕ್ಕಳಿಗೆ ಛದ್ಮ ವೇಷ ಸ್ಪರ್ಧೆ ಕೂಡ ಏರ್ಪಡಿಸಲಾಗಿತ್ತು.