SHARE

ಬೆಳಗಾವಿ: ಅಕ್ರಮವಾಗಿ ನಗರದಲ್ಲಿ ನೆಲೆಸಿದ್ದ ಬಾಂಗ್ಲಾದೇಶಿಗರನ್ನು ನಗರ ಪೊಲೀಸರು ಕಾರ್ಯಾಚರಣೆ ನಡೆಸಿ ಬಂಧಿಸಿದ್ದು ಇಂದು ನಗರದ 2 ನೇ ಜೆಎಂಎಫ್ ಸಿ ನ್ಯಾಯಾಲಯದಲ್ಲಿ ಹಾಜರುಪಡಿಸುತ್ತಿದ್ದಂತೆ ನ್ಯಾಯಾಧೀಶೆ ಒಟ್ಟು 7 ಜನರ ಪೈಕಿ ಒಬ್ಬನಿಗೆ ಒಂದು ದಿನದ ಮಟ್ಟಿಗೆ ಪೊಲೀಸ್ ವಿಚಾರಣೆಗೆ ಹಾಗೂ 6 ಜನರಿಗೆ ನ್ಯಾಯಾಂಗ ಬಂಧನಕ್ಕೆ ಕಳಿಸಲಾಯಿತು.

ಬಂಧನ:ಪೂನಾ ಮತ್ತು ಬೆಳಗಾವಿ ನಗರ ಪೊಲೀಸರ ತಂಡ ಜಂಟಿ ಕಾರ್ಯಚರಣೆ ನಡೆಸಿ ಬಂಧಿಸಿದ್ದು ನ್ಯಾಯಾಲಯಕ್ಕೆ ಶನಿವಾರ ಹಾಜರು ಪಡಿಸಿದೆ.
ಮಾಳಮಾರುತಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ 7 ಜನರನ್ನು ಫಾರೆನ್ ಆ್ಯಕ್ಟ್ 1946 ಅಡಿ ಪ್ರಕರಣ ದಾಖಲಾಗಿದೆ.ಪೂನಾ ಏರಪೋರ್ಟ್ ನಲ್ಲಿ ದುಬೈಗೆ ಹೋಗಲು ಯತ್ನಿಸಿ ಸಿಕ್ಕುಬಿದ್ದ ಮಹಮ್ಮದ ಬೇಪಾರಿ ಎಂಬಾತನನ್ನು ಬಾಯಿಬಿಡಿಸಿದಾಗ ಈ ಪ್ರಕರಣ ಬೆಳಕಿಗೆ ಬಂದಿದೆ. ಆಟೋನಗರ ಮತ್ತು ನಗರದ ಇತರ ಪ್ರದೇಶಗಳ ಮಟನ್ ಶಾಪ್ ಗಳಲ್ಲಿ ಕೆಲಸ ಮಾಡುತ್ತಿದ್ದರು.

ಗಾಂಧಿನಗರದ ರಿಯಾನಾ ಕಟ್ಟಿಮನಿ ಎಂಬುವವಳು ಬಾಂಗ್ಲಾದೇಶಿಯರಿಗೆ ಸುಮಾರು 20 ಆಧಾರ ಕಾರ್ಡ್ ಮಾಡಿಸಿಕೊಟ್ಟಿದ್ದಾಳೆ ಎಂಬುವುದು ತನಿಖೆಯಲ್ಲಿ ತಿಳಿದುಬಂದಿದೆ. ಬಾಂಗ್ಲದೇಶದಿಂದ ನುಸುಳಿ ಬಂದವರು ಎಂಬುವುದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ. ಆಟೊನಗರದಲ್ಲಿ ವಾಸವಿದ್ದ ಇವರನ್ನು ಕೆಲಸಕ್ಕೆ ಇಟ್ಟುಕೊಂಡಿದ್ದ ಮಟನ್ ಕಾರ್ಖಾನೆಯವರ ಮೇಲೂ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಡಿಸಿಪಿ ತಿಳಿಸಿದ್ದಾರೆ. ಪೊಲೀಸ್ ಇಲಾಖೆ ತೀವೃ ಪರಿಶೀಲನೆ ನಡೆಸಿದೆ. ಏಳು ಜನರನ್ನು ಜೆಎಂಎಫ್ ಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.