SHARE

ಬೆಳಗಾವಿ: ಹಿರೇಬಾಗೇವಾಡಿ ಹೋಬಳಿ ಭಾನುವಾರ ವಿದ್ಯುತ್ ಕಣ್ಣಾಮುಚ್ಚಾಲೆಯಿಂದ ತೀವೃ ಬಾಧಿತವಾಯಿತು.ವಿಪರೀತ ಗಾಳಿ, ಮಿಂಚು ಮಳೆಯ ಕಾರಣ ಉಂಟಾದ ಸಮಸ್ಯೆಯಿಂದ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಯಿತು ಎಂದು ಅಧಿಕಾರಿಗಳು ತಿಳಿಸಿದ್ದರೂ, ಜನಸಾಮಾನ್ಯರ ದೂರವಾಣಿ ಕರೆಗಳಿಗೆ ಸ್ಪಂದಿಸಿಲ್ಲ ಎಂಬ ಆರೋಪವೂ ಕೇಳಿಬಂದಿದೆ.

ಬೆಳಗಾವಿ ತಾಲ್ಲೂಕಿನ ರಾಷ್ಟ್ರೀಯ ಹೆದ್ದಾರಿ ನಾಲ್ಕರ ಮುಖ್ಯ ಹೋಬಳಿಗೆ ಕಳೆದ ಒಂದು ವಾರದಿಂದ ವಿದ್ಯುತ್ ಪೂರೈಕೆ ಸಮಸ್ಯೆ ತೀವ್ರಗೊಂಡಿದೆ.ಇವತ್ತಿನ ಭಾನುವಾರವಂತೂ ಇಡೀ ದಿನ ಸುಮಾರು 20ಕ್ಕೂ ಅಧಿಕ ಬಾರಿ ವಿದ್ಯುತ್ ಕಣ್ಣಾಮುಚ್ಚಾಲೆ ಆಡಿ ಜನರ ಪಿತ್ತ ನೆತ್ತಿಗೇರಿಸಿದೆ. ಜನರಿಗೆ ಇದರ ಬಗ್ಗೆ ಸಮರ್ಪಕ ಉತ್ತರ ಸಿಗದ್ದರಿಂದ ಗೊಂದಲಕ್ಕೀಡಾಗಿ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮೊಬೈಲ್ ಚಾರ್ಜ್ ಮಾಡಿಕೊಳ್ಳಲೂ ಸಹ ಅವರಿಗೆ ಅನುವಾಗಲಿಲ್ಲ. ಸದ್ಯ ಸರಿಯಾಗಿ 11 ಕ್ಕೆ ಬೆಳಗಾವಿ ನಗರ ಸೇರಿ ಎಲ್ಲೆಡೆ ಭಾರಿ ಗುಡುಗು ಸಿಡಿಲು ಸಹಿತ ಮಳೆ ಸುರಿಯತೊಡಗಿದ್ದರಿಂದ ಮತ್ತೆ ಬೆಳಗಾವಿಯಲ್ಲೂ ಕರೆಂಟ್ ಕೈಕೊಟ್ಟಿತು.