SHARE

ಬೆಳಗಾವಿ:ನಿರಂತರ ಕಾನೂನು ಕಾಯುವ ಒತ್ತಡಕ್ಕೆ ಬೀಳುವ ಪೊಲೀಸರಿಗೂ ಮಾನಸಿಕ ಹಾಗೂ ದೈಹಿಕ ವಿಶ್ರಾಂತಿ ಜತೆಗೆ ಕ್ಷಮತೆ ಸಾಧಿಸುವುದು ಸಹ ಅವಶ್ಯಕ.ಇಂಥ ಪ್ರಯತ್ನದ ಅಂಗವಾಗಿ ನಗರ ಪೊಲೀಸ್ ಘಟಕ ತನ್ನ ಮುಖ್ಯಸ್ಥ ಟಿ. ಜಿ. ಕೃಷ್ಣಭಟ್ ನೇತೃತ್ವದಲ್ಲಿ ಐತಿಹಾಸಿಕ ಯಳ್ಳೂರು ರಾಜಹಂಸಘಡ ಏರುವ ಮೂಲಕ ಟ್ರೆಕ್ಕಿಂಗ್,ಯೋಗಾ ಹಾಗೂ ವ್ಯಾಯಾಮ ಮಾಡುವ ಮೂಲಕ ಕ್ಷಮತೆ ಪರೀಕ್ಷಿಸಿತು.

ಭಾನುವಾರ ಬೆಳಿಂಬೆಳಿಗ್ಗೆ ಇಡೀ ನಗರ ಪೊಲೀಸ್ ಘಟಕದ ಅಧಿಕಾರಿಗಳು ಮತ್ತು ಸಿಬ್ಬಂಧಿ ಯುದ್ಧಕ್ಕೆ ಬಂದಿಳಿದ ಟ್ರೂಪ್ ನೆನಪಿಗೆ ಬರುವಂತೆ ರಾಜಹಂಸಗಢ ರಸ್ತೆಯಲ್ಲಿ ಕಂಡುಬಂದರು.

ಬೆಳಗಿನ 5:30ಕ್ಕೆ ಆಯುಕ್ತ ಕೃಷ್ಣಭಟ್ ಮತ್ತು ಡಿಸಿಪಿ ಜಿ. ರಾಧಿಕಾ, ಅಮರನಾಥರೆಡ್ಡಿ ಅವರ ನೇತೃತ್ವದಲ್ಲಿ ರಾಜಹಂಸಘಡ ಕೋಟೆಯ ಬೆಟ್ಟ ಏರಲಾಯಿತು.ಎಲ್ಲ ಹಂತದ ಪೊಲೀಸ್ ಅಧಿಕಾರಿಗಳು, ಸಿಬ್ಬಂಧಿಗೆ ವಾಕಿಂಗ್, ಜಾಗಿಂಗ್,ಯೋಗಾ ಹಾಗೂ ಟ್ರೆಕ್ಕಿಂಗ್ ಮಹತ್ವದ ಬಗ್ಗೆ ಹಿರಿಯ ಅಧಿಕಾರಿಗಳು ಮಾರ್ಗದರ್ಶ ನೀಡಿದರು.ಚೆಂದದ ಬೆಳಗಿನ ಪ್ರಶಾಂತ ವಾತಾವರಣದಲ್ಲಿ ಕೆಲಸದ ಒತ್ತಡದ ಆಚೆ ಕಾಲ ಕಳೆದ ಸಿಬ್ಬಂಧಿ ಅಲ್ಪೋಪಹಾರ ಸೇವೆಸಿ ಹಿಂದಿರುಗಿದರು.

ಸಿಬ್ಬಂಧಿಗೆ ಒತ್ತಡದ ಕೆಲಸದ ಮಧ್ಯೆ ರಿಲ್ಯಾಕ್ಸ್ ನೀಡುವುದಕ್ಕಾಗಿ ಇಂಥ ಟ್ರೆಕ್ಕಿಂಗ್ ಶಿಬಿರ ಏರ್ಪಡಿಸಲಾಯಿತು ಎಂದು ಡಿಸಿಪಿ ಜಿ. ರಾಧಿಕಾ ತಿಳಿಸಿದರು.