SHARE

thebelgaumnews.com Exclusive

ಬೆಳಗಾವಿ: ಮಾಜಿ ಮುಖ್ಯಮಂತ್ರಿ ಹಾಗೂ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್. ಡಿ. ಕುಮಾರಸ್ವಾಮಿ ಪುತ್ರ ನಿಖಿಲ್ ಕುಮಾರಸ್ವಾಮಿ “ಜಾಗ್ವಾರ” ಚಿತ್ರದ ಮೂಲಕ ಸ್ಯಾಂಡಲವುಡ್ ಹಾಗೂ ಟಾಲಿವುಡ್ ಗಳಲ್ಲಿ ಏಕಕಾಲಕ್ಕೆ ಧೂಳೆಬ್ಬಿಸಿದ ವಿಷಯ ಎಲ್ಲರಿಗೂ ಗೊತ್ತು.ಆದರೆ ಅದೇ ನಿಖಿಲ್ ಕುಮಾರಸ್ವಾಮಿ ಅಭಿನಯದ ಎರಡನೆಯ ಚಿತ್ರಕ್ಕೆ ಸದ್ದಿಲ್ಲದಂತೆ ತಯಾರಿ ನಡೆದಿದ್ದು ಈಗ ಬಹಳಷ್ಟು ಜನರಿಗೆ ಗೊತ್ತಿಲ್ಲ . ಧ್ರುವ ಸರ್ಜಾ ಅಭಿನಯದ, ಬಹದ್ದೂರ್  ಚಿತ್ರ ನಿರ್ದೇಶಕ ಚೇತನ ನಿರ್ದೇಶನದಲ್ಲಿ ಮೂಡಿ ಬರಲಿರುವ ಈ ಚಿತ್ರಕ್ಕೆ ಬೆಳಗಾವಿಯ ಬೆಡಗಿ ರಿಯಾ ನಲವಡೆ ನಾಯಕಿಯಾಗಿ ಆಯ್ಕೆಯಾಗಿದ್ದಾಳೆ.

ಮಾಡೆಲಿಂಗ್ ನಲ್ಲಿ ಗುರುತಿಸಿಕೊಂಡಿರುವ ರಿಯಾ ನಲವಡೆ , ಲಕ್ಷ್ಮಿ ರೈ ನಂತರ ಕನ್ನಡ ಚಿತ್ರಕ್ಕೆ ನಾಯಕಿಯಾಗಿ ಆಯ್ಕೆ ಯಾಗಿದ್ದಾಳೆ. ಬೆಳಗಾವಿಯಲ್ಲಿ ನಲವಡೆ ಕುಟುಂಬ  ಹಲವು ಉದ್ಯಮ ನಡೆಸುತ್ತಿದ್ದು ಈಗ ಚಿತ್ರೋದ್ಯಮಕ್ಕೆ ಪಾದಾರ್ಪಣೆ ಮಾಡದಂತಾಗಿದೆ.