SHARE

ಬೆಳಗಾವಿ:ಕೇಂದ್ರ ಮೋದಿ ಸರಕಾರ ಕಾರ್ಮಿಕ ವರ್ಗದ ಹಿತ ಕಾಯದೇ ಮಾಲೀಕ ವರ್ಗದ ಏಜೆಂಟರಂತೆ ವರ್ತಿಸುತ್ತಿದೆ ಎಂದು ಸಿಐಟಿಯು ರಾಜ್ಯಾಧ್ಯಕ್ಷೆ ವರಲಕ್ಷ್ಮೀ ಅಸಮಧಾನ ವ್ಯಕ್ತಪಡಿಸಿದರು.ಬೆಳಗಾವಿ ಜಿಲ್ಲಾ ಗುತ್ತಿಗೆ ಕಾರ್ಮಿಕರ ಸಮಾವೇಶದ ಮುಖ್ಯ ಅತಿಥಿಯಾಗಿ ಶನಿವಾರ ಸನ್ಮಾನ ಸ್ವೀಕರಿಸಿ ಮಾತನಾಡಿದ ಸಿಐಟಿಯು ರಾಜ್ಯಾಧ್ಯಕ್ಷೆ ವರಲಕ್ಷ್ಮೀ ಬೆಳಗಾವಿ ಜಿಲ್ಲಾ ಗುತ್ತಿಗೆ ಕಾರ್ಮಿಕರ ಸಮಾವೇಶ, ರಾಜ್ಯ ಕೆಪಿಟಿಸಿಎಲ್, ಹೆಸ್ಕಾಂ ವಿದ್ಯುತ್ ಉಪಕೇಂದ್ರಗಳ ಗುತ್ತಿಗೆ ಕಾರ್ಮಿಕರ ಸಂಘ ಮತ್ತಿತರ ಸಂಘಟನೆಗಳ ಸಹಯೋಗದಲ್ಲಿ ಸಮಾಲೋಚನಾ ಸಭೆ IMA ಸಭಾಂಗಣದಲ್ಲಿ ಆಯೋಜಿಸಲಾಗಿತ್ತು. ಬಂಡವಾಳಗಾರರ ಹೆಸರಿನಲ್ಲಿ ನೂರಕ್ಕೆ 50 ಪ್ರತಿಶತ ಸರಕಾರ ಗುತ್ತಿಗೆ ಪದ್ಧತಿ ನೀಡಿದೆ. ಕಾರ್ಮಿಕ ವರ್ಗದ ಸಮಸ್ಯೆಗಳನ್ನು ಹೇಳಲು ಹೋದರೆ ಇಷ್ಟವಿದ್ದರೆ ಕೆಲಸ ಮಾಡು ಇಲ್ಲವೇ ನಡಿ ಎಂಬ ಮಾತು ಸದ್ಯ ಎಲ್ಲೆಡೆ ಕೇಳಿ ಬರುತ್ತಿದೆ. ಕೆಲಸಕ್ಕೆ ಸಮವಾದ ವೇತನ ಇಂದು ಕಾರ್ಮಿಕ ವರ್ಗಕ್ಕೆ ಸಿಗುತ್ತಿಲ್ಲ ಎಂದು ವಿಷಾದ ವ್ಯಕ್ತಪಡಿಸಿದರು.

2016 ರಲ್ಲಿ ಸುಪ್ರೀಂಕೋರ್ಟ್ ಸಮಾನ ಕೆಲಸಕ್ಕೆ ಸಮಾನ ವೇತನ ಕೊಡುವಂತೆ ಸೂಚಿಸಿದ್ದು, ಒತ್ತಾಯಪೂರ್ವಕವಾಗಿ ಕಾರ್ಮಿಕರಿಂದ ಕೆಲಸ ಮಾಡಿಸಿಕೊಳ್ಳಬಾರದು ಎಂದು ಸೂಚಿಸಿದೆ. ಇದು ಮೂರನೆಯ ಸುಪ್ರೀಂಕೋರ್ಟ್ ತೀರ್ಪು. ಪಾರ್ಲಿಮೆಂಟ್ ಮತ್ತು ವಿಧಾನಸೌಧ ಏನು ಕೆಲಸ ಮಾಡುತ್ತಿವೆ ಎಂದು ವಿಷಾದ ವ್ಯಕ್ತಪಡಿಸಿದರು. ಚಹಾ, ಬಿಸ್ಕೀಟ್  ತಿಂದು ಬಡಿಸಿದ ಊಟ ಮಾಡಿ ಕಾರ್ಮಿಕರು ಸಂಘಟಿತರಾಗಿ ಹೋರಾಟ ಮಾಡುತ್ತಿಲ್ಲ ಎಂದರು.ಯುವಶಕ್ತಿಯ ಕೌಶಲ್ಯ ಬಳಸಿಕೊಂಡು ಸರಕಾರ ಮತ್ತು ಕಂಪನಿ, ಕಾರ್ಖಾನೆಗಳು use and throw ಸಣ್ಣಬುದ್ಧಿ ತೋರಿಸುತ್ತ ಕಶರ್ಮಿಕ ವರ್ಗದ ಭವಿಷ್ಯ ಹಾಳು ಮಾಡುತ್ತಿದ್ದಾರೆ ಎಂದರು.

ಕಾರ್ಮಿಕ ಕಾನೂನುಗಳ ಜಾರಿಗಾಗಿ ರಾಜ್ಯಾದ್ಯಂತ ಹೋರಾಟ ನಡೆಸಲಾಗುವುದು ಎಂದರು. ಕರ್ನಾಟಕ ಸರಕಾರದಲ್ಲಿ ನೌಕರರ ವೇತನ ಬಹಳ ಕಡಿಮೆ ಇದೆ. 42 ವರ್ಷ ಸೇವೆ ಸಲ್ಲಿಸುವ ಅಂಗನವಾಡಿ ಕಾರ್ಯಕರ್ತೆಯರಿಗೆ ಕನಿಷ್ಠ ವೇತನ ಸಹ ಸರಕಾರ ಕೊಡುತ್ತಿಲ್ಲ. ಗ್ರಾಮೀಣ ಜನಜೀವನ ಸುಧಾರಿಸಲು ಅಂಗನವಾಡಿ ಕಾರ್ಯಕರ್ತೆಯರು, ಮಹಿಳೆಯರು ಮಾಡುವ ಶ್ರಮಕ್ಕೆ ಸರಕಾರದಲಗಲಿ ಬೆಲೆ ಇಲ್ಲ. ಹೋರಾಟಗಳಿಗೆ ಸರಕಾರದಲ್ಲಿ ಬೆಲೆ ಇಲ್ಲ. ಕಬ್ಬಿನ (ಸರಕಾರ) ಎಷ್ಟೇ ಗಟ್ಟಿಯಾಗಿದ್ದರೂ ಬೆಂಕಿ ಕೆಂಡದಲ್ಲಿ ಕಾಯಿಸಿ ನಮಗೆ ಬೇಕಾದಂತೆ ಮಣಿಸಬಹುದು ಎಂಬುವುದು ದಿಟ ಅದರಂತೆ ಸರಕಾರದ ವಿರುದ್ಧ ನಮ್ಮ ಹಕ್ಕು ಪಡೆಯಲು ತೊಡೆ ತಟ್ಟಬೇಕು ಎಂದರು.

ಕೇಂದ್ರದ ಮೋದಿ ಸರಕಾರ ಕಾರ್ಖಾನೆ ಕಂಪನಿ ಮಾಲಿಕರ ಏಜೆಂಟನಂತೆ ವರ್ತಿಸುತ್ತಿದ್ದಾರೆ. ಪ್ರಧಾನಿ ಮೋದಿ ಯೋಜನೆಗಳು ಜನಸಾಮಾನ್ಯರು ನಿಂತ ನೆಲ( land) ಅದುರಿಸುವಂತೆ ಇವೆ. 7ನೇ ವೇತನ ಆಯೋಗ ಕನಿಷ್ಠ 15 ಸಾವಿರ ವೇತನ ನಿಗದಿಪಡಿಸಿದ ಕೇಂದ್ರ ಯಾಕೆ ಜಾರಿಗೆ ತಂದಿಲ್ಲ ಎಂದು ಪ್ರಶ್ನಿಸಿದ ಅವರು ಈ ಬಗ್ಗೆ ಸುಗ್ರಿವಾಜ್ಞೆ ಹೊರಡಿಸಲಿ ಎಂದರು. ಉಳ್ಳವರ ಪರವಾಗಿ ಇಂದು ಕೇಂದ್ರ ಸರಕಾರಗಳು ಇವೆ. ಆಂದ್ರ ಮತ್ತು ತಮಿಳುನಾಡು ರಾಜ್ಯಗಳ ಮಾದರಿಯಲ್ಲಿ ನಮ್ಮ ಕರ್ನಾಟ ಸರಕಾರ ಜನಪರ, ಕಾರ್ಮಿಕ ಪರ ಯೋಜನೆಗಳನ್ನು ಜಾರಿಗೆ ತರಬೇಕು ಎಂದರು. ಸಂಘಟನೆ ಮತ್ತು ಹೋರಾಟವನ್ನು ಕಾರ್ಮಿಕರು ಗಟ್ಟಿಗೊಳಿಸಬೇಕು. ರಾಜ್ಯದ ನಾಲ್ಕು ವಿದ್ಯುತ್ ನಿಗಮಗಳ ಕಾರ್ಮಿಕರು ತಮ್ಮ ಸಮಸ್ಯೆಗಳ ಪಟ್ಟಿ ಮಾಡಲಾಗುತ್ತಿದ್ದು ಮುಂದಿನ ದಿನಗಳಲ್ಲಿ ರಾಜ್ಯ ಸಮಿತಿಯಿಂದ ಹೋರಾಟ ಮಾಡಲಾಗುವುದು ಎಂದರು.

ಕಾಂಗ್ರೆಸ್ ಕಾರ್ಮಿಕ ಘಟಕದ ಜಿಲ್ಲಾ ಅಧ್ಯಕ್ಷ ಲಕ್ಕನ್ನ ಸವಸುದ್ದಿ  ಮುಖ್ಯ ಅತಿಥಿಯಾಗಿ ಮಾತನಾಡಿ ಕಾರ್ಮಿಕರ ಸಮಸ್ಯೆಗಳಿಗೆ ಸರಕಾರ ಸಾಕಷ್ಟು ಸ್ಪಂದಿಸುವ ಪ್ರಯತ್ನ ನಡೆಸಿದೆ. ಗುತ್ತಿಗೆದಾರರು, ಏಜೆನ್ಸಿಗಳು ಕಾರ್ಮಿಕರ ಸಂಬಳದ ಹಣದಲ್ಲಿ ಕೊಳ್ಳೆ ಹೊಡೆಯುತ್ತಿದ್ದರು ಅದನ್ನು ತಡೆಯಲು ಸಾಕಷ್ಟು  ಪ್ರಯತ್ನ ಸಹ ಮಾಡಲಾಗಿದೆ. ಕನಿಷ್ಠ ವೇತನ ಕೊಡಲು ಮುಖ್ಯಮಂತ್ರಿ ಅವರನ್ನು ಶೀಘ್ರದಲ್ಲೇ ಒತ್ತಾಯಿಸಲಾಗುವುದು. ಎರಡ್ಮೂರು ತಿಂಗಳಲ್ಲಿ ಕನಿಷ್ಠ ವೇತನ ಸರಕಾರ ಘೋಷಿಸುವ ನಿರೀಕ್ಷೆ ಇದೆ. ಕಾರ್ಮಿಕರ ಸಮಸ್ಯೆಗಳಿಗೆ ನಾವು ಬೆನ್ನೆಲುಬಾಗಿದ್ದೇವೆ ಎಂದರು. ಯಾವುದೇ ಏಜೆನ್ಸಿಗಳಿಗೆ ಕಾರ್ಮಿಕರು ಹೆದರುವ ಅವಶ್ಯಕತೆಯಿಲ್ಲ. ಸರಕಾರಿ ಕಚೇರಿ ಮತ್ತು ಕಾರ್ಮಿಕ ನ್ಯಾಯಾಲಯಗಳ ಕದ ತಟ್ಟಬಹುದು ಎಂದರು.

ಕಾಂಗ್ರೆಸ್ ಕಾರ್ಮಿಕ ಘಟಕದ ರಾಜ್ಯ  ಪ್ರಧಾನ ಕಾರ್ಯದರ್ಶಿ ಮಂಜುಳಾ ವಿಜಯಕುಮಾರ ಮುಕುಂದ ಸಮಾವೇಶ ಉದ್ಘಾಟಿಸಿದರು.ಕಾರ್ಯಕ್ರಮದಲ್ಲಿ ಕಾರ್ಮಿಕ ಅಧಿಕಾರಿ ಅನಿಲ ಬಗಟೆ, ಆನಂದ ಅಂಗಡಿ, ಜ್ಞಾನದೇವ ಬಡಿಗೇರ, ಶಾಂತಿನಾಥ ಸಣಕಿ, ಸಾಗರ ಕೆ. ಆರ್.  ಸಂಜು ತಳವಾರ, ಬಾಬಾಸಾಬ ಡಿ. ಎನ್. ಇತರರು ಉಪಸ್ಥಿತರಿದ್ದರು.