SHARE

ಬೆಳಗಾವಿ: ನಗರದ ಪ್ರತಿಷ್ಠಿತ ಸೇಂಟ್ ಪಾಲ್ ಆಂಗ್ಲ ಮಾಧ್ಯಮ ಶಾಲೆ ದೊಡ್ಡ ಪ್ರಮಾಣದಲ್ಲಿ ತನ್ನ ಹಳೆ ವಿದ್ಯಾರ್ಥಿಗಳನ್ನು ಸೇರಿಸುವ ಮೂಲಕ ಗಿನ್ನೆಸ್ ದಾಖಲೆ ಬರೆದಿದೆ.ಬೆಳಗಾವಿ ಸೇಂಟ್ ಪಾಲ್ 1856 ರಲ್ಲಿ ಸ್ಥಾಪಿತವಾಗಿ ಇಂದಿಗೆ ಸರಿ ಸುಮಾರು 161 ವರ್ಷಗಳು ಸಂದಿದ್ದು ಹಳೆಯ ವಿದ್ಯಾರ್ಥಿಗಳ ಸಮ್ಮಿಲನದೊಂದಿಗೆ ವಿಶೇಷತೆಗೆ ಪಾತ್ರವಾಗಿದೆ.ನಗರದ ಕ್ಯಾಂಪ್ ಪ್ರದೇಶದ ಶಾಲಾ ಆವರಣದಲ್ಲಿ ಹಳೆ ವಿದ್ಯಾರ್ಥಿಗಳು, ಶಿಕ್ಷಕರು ಸೇರಿ ಸುಮಾರು 3638 ಜನ ಸೇರಿದ್ದರು.  ತನ್ನ ಅಮೂಲ್ಯ 160 ವರ್ಷಗಳ ಯಶಸ್ವಿ ನಡಿಗೆಯ ಅಂಗವಾಗಿ ಈ ‘ಪೌಲೈಟ್ ರ್ಯಾಲಿ’ ಆಯೋಜಿಸಲಾಗಿತ್ತು.

ಅಮೇರಿಕದ ವಾಷಿಂಗ್ಟನ್ ನ ಸ್ಟೇಡಿಯಂ ಶಾಲೆಯ ಇಲ್ಲಿವರೆಗಿನ ದಾಖಲೆ 3299 ಗಿನ್ನೆಸ್ ದಾಖಲೆ ಮುರಿದು ಹಾಕಿದ್ದು ಸೇಂಟ್ ಪಾಲ್ ಈಗ ತನ್ನ ವಿದ್ಯಾರ್ಥಿಗಳ reunion ಸಾಧಿಸಿದೆ. 1943 ರಿಂದ 2016 ರವರೆಗಿನ ಎಲ್ಲ ಹಳೆಯ ವಿದ್ಯಾರ್ಥಿಗಳು, ಅಧ್ಯಾಪಕರು ಸೇರಿಬಂದಿದ್ದರು.ಗಿನ್ನೆಸ್ ದಾಖಲೆಯ ಅಧಿಕೃತ ಪತ್ರ ಬರುವುದಕ್ಕಾಗಿ ಶಾಲೆ ಕಾಯುತ್ತಿದೆ. ಹಳೆ ವಿದ್ಯಾರ್ಥಿಗಳ ಯಶಸ್ವಿ ಸಮ್ಮಿಳನ ಸಾಧಿಸುವ ಪ್ರಯತ್ನ ಈಡೇರಿದೆ ಎಂದು ಶಾಲೆಯ ಆಡಳಿತ ಮಂಡಳಿ ಹರ್ಷ ವ್ಯಕ್ತಪಡಿಸಿದೆ.