SHARE

ಬೆಳಗಾವಿ: ಗೋಕಾಕ ತಾಲೂಕಿನ ಹಳ್ಳೂರ ಗ್ರಾಮದಲ್ಲಿನ *ಮನೀಷ್* ಸಾರಾಯಿ ಅಂಗಡಿಯೊಂದನ್ನು ಬಂದ್ ಮಾಡಲು ಕಳೆದ ಮೂರ್ನಾಲ್ಕು ವರ್ಷಗಳಿಂದ ಅಲ್ಲಿನ ಮಹಿಳೆಯರು ಧ್ವನಿ ಎತ್ತುತ್ತ ಬಂದಿದ್ದರೂ ಯಾವ ಪ್ರಯೋಜನವಾಗಿಲ್ಲ.

ಮತ್ತೆ ಶುಕ್ರವಾರ ಹಳ್ಳೂರ ಮಹಿಳೆಯರು ಜಿಲ್ಲಾಧಿಕಾರಿ ಕಚೇರಿಗೆ ಪ್ರತಿಭಟನೆ ನಡೆಸಿ ಪ್ರಾದೇಶಿಕ ಆಯುಕ್ತ ಎನ್.ಜಯರಾಮ ಅವರಿಗೆ ಮನವಿ ಸಲ್ಲಿಸಿದರು.ಹಿಂದೊಮ್ಮೆ ಗ್ರಾಮಸ್ಥರ ಬೇಸರ, ಅರಭಾವಿ ಶಾಸಕರ ಸೂಚನೆ ಮೇರೆಗೆ ಬಂದಾಗಿದ್ದ ಬಾರ್ ಈಗ ಮತ್ತೆ ತೆರೆದುಕೊಂಡಿದೆ.ಸದರಿ ಮಧ್ಯದಂಗಡಿ ಕೂಡಲೇ ಬಂದ್ ಮಾಡಿಸಬೇಕೆಂದು ಒತ್ತಾಯಿಸಿದರು.ರೈತ ಸಂಘಟನೆ ಬೆಂಬಲ ವ್ಯಕ್ತಪಡಿಸಿತು.