SHARE

ಬೆಳಗಾವಿ:ಗುತ್ತಿಗೆದಾರನ ಕೆಲಸದ ಬಿಲ್ ಪಾಸು ಮಾಡಲು 10 ಸಾವಿರ ಲಂಚದ ಬೇಡಿಕೆ ಇಟ್ಟಿದ್ದ ಆರೋಪದ ಮೇಲೆ ದಾಳಿ ಮಾಡಿ ಸವದತ್ತಿ ಹೆಸ್ಕಾಂ AEE ದೇವರಾಜ ಹೆಗಡೆ ಅವರನ್ನು ಎಸಿಬಿ ಬಲೆಗೆ ಕೆಡವಿದೆ. ಆರ್. ಕಂಬಾರ ಎಂಬ ಎಲೆಕ್ಟ್ರಿಕ್ ಗುತ್ತಿಗೆದಾರ ಎಸಿಬಿ ಪೊಲೀಸರಿಗೆ ದೂರು ನೀಡಿದ್ದರು. ಇಂದು ಎಸಿಬಿ ಇನ್ಸಪೆಕ್ಟರ್ ಜೆ. ರಘು ನೇತ್ರತ್ವದಲ್ಲಿ ದಾಳಿ ಮಾಡಿ ರೆಡ್ ಹ್ಯಾಂಡ್ ಆಗಿ ಅಧಿಕಾರಿಯನ್ನು ಬಲೆಗೆ ಕೆಡವಲಾಗಿದೆ ಎಂದು ಎಸಿಬಿ ಮೂಲಗಳು ಸ್ಪಷ್ಠಪಡಿಸಿವೆ. ದಾಳಿಯಲ್ಲಿ ಸಬ್ ಇನ್ಸಪೆಕ್ಟರ್ ಕಬ್ಬೂರಿ ಮತ್ತಿತರರು ಭಾಗವಹಿಸಿದ್ದರು. ಬೆಳಗಾವಿ ಎಸಿಬಿ ಠಾಣೆಯಲ್ಲಿ 08/17 u/s 7,13(I) d PC Act ಅಡಿ ಪ್ರಕರಣ ದಾಖಲಾಗಿದೆ.