SHARE

ಬೆಳಗಾವಿ:ಬೆಳಗಾವಿಯಲ್ಲಿ ವಾಸಿಸುವ ಎಲ್ಲರೂ ಕರ್ನಾಟಕದವರು ಮತ್ತು ಕನ್ನಡಿಗರು ಎಂದು ಡಿಸಿ ಎನ್. ಜಯರಾಮ ತಿಳಿಸಿದ್ದಾರೆ.ಶನಿವಾರ ಮರಾಠಿ ಭಾಷಿಕರು ತಮ್ಮ ಸಮಸ್ಯೆಯನ್ನು ನನ್ನ ಗಮನಕ್ಕೆ  ತಂದಿದ್ದಾರೆ. ರಾಜಕೀಯ ಹೊರತಾಗಿ ಅವರ ಎಲ್ಲ ಬೇಡಿಕೆಗಳನ್ನು ಸಹಾನುಭೂತಿಯಿಂದ ಪರಿಶೀಲಿಸಲು ಸರಕಾರ ಚಿಂತನೆ ಮಾಡಲು ಅವರ ಮನವಿ ಪತ್ರ ಸರಕಾರಕ್ಕೆ ಕಳಿಸಲಾಗಿದೆ.ಈ ಕುರಿತು ಸರಕಾರ ಕ್ರಮ ಕೈಗೊಳ್ಳುತ್ತದೆ ಎಂದು ಜಿಲ್ಲಾಧಿಕಾರಿ ಎನ್.ಜಯರಾಮ್ ಹೇಳಿದರು.

ಅವರು ಸೋಮವಾರ ಜಿಲ್ಲಾಧಿಕಾರಿ ಕಚೇರಿ ಸಭಾ ಭವನದಲ್ಲಿ ಜರುಗಿದ ಕನ್ನಡ ಸಂಘಟನೆಗಳ ಮನವಿ ಸ್ವೀಕಾರ ಸಭೆಯಲ್ಲಿ ಮಾತನಾಡಿದರು.ರಾಜ್ಯ ಸರಕಾರದ ಒಬ್ಬ ಅಧಿಕಾರಿಯಾಗಿ ಕಾನೂನು ಚೌಕಟ್ಟಿನಲ್ಲಿ ಎಲ್ಲ ಭಾಷಿಕರನ್ನು ರಕ್ಷಣೆ ಮಾಡುವ ಜವಾಬ್ದಾರಿ ನನ್ನ ಮೇಲಿದೆ ಎಂದರು.ಎಂಇಎಸ್ ಬೇಡಿಕೆಯನ್ನು ಕಸದ ಬುಟ್ಟಿಗೆ ಎಸೆಯುವಂತೆ ಕನ್ನಡ ಸಂಘಟನೆಯ ಸದಸ್ಯರು ಈ ಸಂದರ್ಭ ಆಗ್ರಹಿಸಿ ಆಕ್ರೋಶ ವ್ಯಕ್ತಪಡಿಸಿದರು. ಜಿಲ್ಲಾಧಿಕಾರಿ ಜಯರಾಮ ಅವರನ್ನು ಸರಕಾರ ಇನ್ನೊಂದು ವರ್ಷ ಇಲ್ಲೇ ಮುಂದುವರೆಸಬೇಕು ಎಂದು ಆಗ್ರಹಿಸಿದರು. ಎಂಇಎಸ್ ಆಟಾಟೋಪಗಳಿಗೆ ಕನ್ನಡಿಗರು  ಒಗ್ಗಟ್ಟಾಗಿವುದಾಗಿ ಎಲ್ಲ ನಾಯಕರು ಘೋಷಿಸಿದರು.

ಸಿದ್ದನಗೌಡಾ ಪಾಟೀಲ, ರಾಘವೇಂದ್ರ ಜೋಶಿ, ಅಶೋಕ ಚಂದರಗಿ , ಭೂಪಾಲ ಅತ್ತು, ದೀಪಕ ಗುಡಗನಟ್ಟಿ, ಮಹಾದೇವ ತಳವಾರ  ಸೇರಿದಂತೆ ಮುಂತಾದವರು ಸಭೆಯಲ್ಲಿ ಭಾಗವಹಿಸಿದ್ದರು.