SHARE

ಬೆಳಗಾವಿ: ಬೆಳಗಾವಿಯಲ್ಲಿ ಇನ್ಮುಂದೆ ನಗರ ಸೇವಕರು ಕರ್ನಾಟಕ ವಿರೋಧಿ ನೀತಿ ಅನುಸರಿಸಿದ ವರದಿಯಾದರೆ ಹುಷಾರ್ ಎಂದು ನಗರಾಭಿವೃದ್ಧಿ ಸಚಿವ ರೋಷನ್ ಬೇಗ್ ಎಚ್ಚರಿಸಿದರು.

ಸೋಮವಾರ ನಗರದಲ್ಲಿ ಸುದ್ದಿಗಾರರಿಗೆ ಎದುರಾಗಿ ಗಡಿನಾಡಲ್ಲಿ ಇನ್ಮುಂದೆ ಪಾಲಿಕೆ ಸದಸ್ಯರು ನಾಡ ವಿರೋಧಿ ಚಟುವಟಿಕೆ ನಡೆಸಿದರೆ‌ ಅವರ ಸದಸ್ಯತ್ವ ರದ್ದಾಗಲಿದೆ. ನಾಡವಿರೋಧಿ ಚಟುವಟಿಕೆ ನಡೆಸದಂತೆ ಹೊಸ ಕಾಯ್ದೆ ಸದ್ಯದಲ್ಲೇ ತರಲಾಗುತ್ತಿದೆ ಎಂದರು.

ವ್ಯಂಗ್ಯ:  ಬಿಜೆಪಿ‌ ರಾಜ್ಯಾಧ್ಯಕ್ಣ‌ ಬಿಎಸವೈ ದಲಿತರ ಮನೆಯಲ್ಲಿ ಊಟ ಪ್ರಕರಣ ಕುರಿತಾಗಿ ಸಚಿವ ರೋಷನ ಬೇಗ್ ಖಾರವಾಗಿ ಪ್ರತಿಕ್ರಿಯೆ ನೀಡಿದರು.ಬಿಎಸ್ವೈ ದಲಿತರ ಮನೆಗೆ ಹೋಗಿ ಹೋಟೆಲ್ ಇಡ್ಲಿ ತಿನ್ನವುದು ನನಗೆ ನಗುಬರಿಸುತ್ತದೆ. ಬಿಎಸವೈ ಗೆ ದಲಿತರ ಮನೆ ಊಟ ಹಿಡಿಸಲ್ವಾ? ಅವರಿಗೆ ದಲಿತರ ಮನೆಗೆ ಹೋಗಿ ಹೋಟೆಲ್ ತಿಂಡಿನೇ ಬೇಕಾ ಎಂದು ರೋಷಣ ಬೇಗ್ ಖಾರವಾಗಿ ಪ್ರಶ್ನಿಸಿದ್ದಾರೆ..ಈಶ್ವರಪ್ಪ ಯಡಿಯೂರಪ್ಪ ಕಚ್ಚಾಟ ಮರೆಸಲು ಮಳೆಗಾಲದಲ್ಲಿ ಬರದ ಪ್ರವಾಸ ಆರಂಭಿಸಿದ್ದಾರೆಂದು ಸಚಿವ ಬೇಗ ವ್ಯಂಗ್ಯವಾಡಿದರೆ.